2 ಗಂಟೆಗೂ ಅಧಿಕ ಕಾಲ ನಿಂತುಕೊಂಡು ಫ್ಯಾನ್ಸ್ ಗೆ ಸೆಲ್ಫಿ ನೀಡಿದ ಪ್ಯಾನ್ ಇಂಡಿಯಾ ಸ್ಟಾರ್ ಯಶ್: ಅಭಿಮಾನಿಗಳು ಫುಲ್ ಖುಷ್!

ಕೆಜಿಎಫ್ 1 ಮತ್ತು 2 ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಕನ್ನಡದ ನಟ ಯಶ್.  ಹೆಸರು, ಹಣ ಬಂದರೂ ಈಗಲೂ ಯಶ್ ಅಭಿಮಾನಿಗಳ ಜೊತೆ ಪ್ರೀತಿಯಿಂದ  ನಡೆದುಕೊಳ್ಳುತ್ತಾರೆ ಎಂದು ಹಲವರು ಹೇಳುತ್ತಾರೆ.
ಅಭಿಮಾನಿಗೆ ಸೆಲ್ಫಿ ನೀಡಿದ ಯಶ್
ಅಭಿಮಾನಿಗೆ ಸೆಲ್ಫಿ ನೀಡಿದ ಯಶ್
Updated on

ಕೆಜಿಎಫ್ 1 ಮತ್ತು 2 ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಕನ್ನಡದ ನಟ ಯಶ್.  ಹೆಸರು, ಹಣ ಬಂದರೂ ಈಗಲೂ ಯಶ್ ಅಭಿಮಾನಿಗಳ ಜೊತೆ ಪ್ರೀತಿಯಿಂದ  ನಡೆದುಕೊಳ್ಳುತ್ತಾರೆ ಎಂದು ಹಲವರು ಹೇಳುತ್ತಾರೆ. ಇತ್ತೀಚಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮವೊಂದರ ವೇಳೆ 700ಕ್ಕೂ ಹೆಚ್ಚು ಅಭಿಮಾನಿಗಳಿಗೆ 2 ಗಂಟೆಗೂ ಅಧಿಕ ಕಾಲ ನಿಂತು ವೈಯಕ್ತಿಕ ಫೋಟೋ/ ಸೆಲ್ಫಿ ಕೊಟ್ಟಿದ್ದಾರೆ. 

ಕಾರ್ಯಕ್ರಮದ ಸಂಘಟಕರು ಗುಂಪು ಚಿತ್ರಗಳನ್ನು ತೆಗೆದುಕೊಳ್ಳಿ, ಜನ ಸೇರುತ್ತಾರೆ, ಸಮಯವಾಗುತ್ತದೆ, ತೊಂದರೆಯಾಗುತ್ತದೆ ಎಂದು ಸಲಹೆ ನೀಡಿದ್ದರಂತೆ. ಆದರೆ ಯಶ್ ಅದಕ್ಕೆ ಒಪ್ಪಲಿಲ್ಲವಂತೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಯೊಬ್ಬ ಫೋಟೋ ಕ್ಲಿಕ್ ಮಾಡಲು ನಿರ್ಧರಿಸಿದರು. ಯಶ್ ತಾಳ್ಮೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಯಶ್ ಕೂಡ ಭಾಗವಹಿಸಿದ್ದರು. ಬಹುದಿನಗಳ ನಂತರ ಯಶ್ ಅಭಿಮಾನಿಗಳ ಮುಂದೆ ಬಂದಿದ್ದರು. ಹಾಗಾಗಿ ಅಲ್ಲಿರುವವರಿಗೆ ಯಶ್ ಜೊತೆ ಫೋಟೋ ತೆಗೆಸಿಕೊಳ್ಳುವ ಆಸೆ  ಇತ್ತು. ಈ ಸಂದರ್ಶನದ ಬಳಿಕ ಸುಮಾರು 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಯಶ್ 2 ಗಂಟೆ ನಿಂತು ಫೋಟೋ ಕೊಟ್ಟರು. ನಗುತ್ತಲೇ ಪ್ರೀತಿಯಿಂದ ಫೋಟೋಗೆ ರಾಕಿ ಭಾಯ್ ಪೋಸ್ ನೀಡಿರೋದು ಫ್ಯಾನ್ಸ್ ಖುಷಿ ಕೊಟ್ಟಿದೆ. ಯಶ್‌ನ ಈ ನಡೆಯಿಂದ ಫ್ಯಾನ್ಸ್ ದಿಲ್ ಖುಷ್ ಆಗಿದ್ದು ಭಾರೀ ಸುದ್ದಿಯಾಗಿದೆ.

ಹೊಸ ವರ್ಷ ಜನವರಿ 7ರಂದು ಯಶ್ ಹುಟ್ಟುಹಬ್ಬವಾಗಿದ್ದು, ಕೆಜಿಎಫ್ ನಂತರ ಅವರ ಮುಂದಿನ ಚಿತ್ರ, ಯೋಜನೆ ಬಗ್ಗೆ ಘೋಷಿಸುವುದನ್ನು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com