ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ; ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2

ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ.
ಕೆಜಿಎಫ್ ಚಾಪ್ಟರ್ 2
ಕೆಜಿಎಫ್ ಚಾಪ್ಟರ್ 2
Updated on

ಹೈದರಾಬಾದ್: ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ.

ಈ ಬಾರಿಯೂ ಕೆಜಿಎಫ್ ಚಾಪ್ಟರ್ 2 ಚಿತ್ರ ತನ್ನ ಗಳಿಕೆ ಮೂಲಕವೇ ಮತ್ತೆ ದಾಖಲೆ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಕೆಜಿಎಫ್ 2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ. ಸಿಂಗಲ್‌ ಸ್ಕ್ರೀನ್‌ ಮಾತ್ರವಲ್ಲದೇ ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲೂ ದಾಖಲೆ ಮಾಡಿದ್ದು, ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ 2 ಪಾತ್ರವಾಗಿದೆ.

ಈ ಕುರಿತಂತೆ ಆಂಧ್ರ ಬಾಕ್ಸಾಫೀಸ್ ಡಾಟ್ ಕಾಮ್ (@AndhraBoxOffice) ಟ್ವಿಟರ್ ಖಾತೆ ವರದಿ ಮಾಡಿದ್ದು, ಮಲ್ಟಿಪ್ಲೆಕ್ಸ್‌ನ ಪಿ.ವಿ.ಆರ್‌. ಸಿನಿಮಾಸ್‌ಗಳಲ್ಲಿ ಈ ಚಿತ್ರ ದಾಖಲೆಯ 121.4 ಕೋಟಿ ರೂ ಗಳ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್‌ ಮಾಡಿದೆ. ಇದು ಮಲ್ಟಿಪ್ಲೆಕ್ಸ್‌ ಇತಿಹಾಸದಲ್ಲೇ ದಾಖಲೆಯ ಗಳಿಕೆಯಾಗಿದೆ ಎನ್ನಲಾಗಿದೆ.

ದೇಶದಾದ್ಯಂತ 173 ಪಿವಿಆರ್‌ ಸಿನಿಮಾ ಮಂದಿರಗಳಲ್ಲಿ ಈ ಚಿತ್ರ ದಾಖಲೆ ಮಾಡಿದ್ದು,. 2022ರಲ್ಲಿ ಪಿವಿಆರ್‌ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್‌ ಸಿನಿಮಾ 93.7 ಕೋಟಿ ರೂ,  ಭೂಲ್‌ಭೂಲ್ಲಯಾ 47.4 ಕೋಟಿ ರೂ, ಡಾಕ್ಟರ್‌ ಸ್ಟ್ರೇಂಜ್‌–2 45.8 ಕೋಟಿ ರೂ ಹಾಗೂ ವಿಕ್ರಮ್‌ ಸಿನಿಮಾ 26.6 ಕೋಟಿ ರೂ ಗಳಿಕೆ ಕಂಡಿತ್ತು. 

ಚಿತ್ರ ಬಿಡುಗಡೆಯಾಗಿ 20 ದಿನಗಳಲ್ಲಿ 1000 ಕೋಟಿ ಕ್ಲಬ್‌ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೊಸ ದಾಖಲೆ ಕೂಡ ಕೆಜಿಎಫ್ 2 ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com