'ಶ್ಯಾನೆ ಟಾಪ್' ಹುಡುಗಿ ಅದಿತಿ ಪ್ರಭುದೇವ ಮದುವೆ ದಿನಾಂಕ ಫಿಕ್ಸ್: ಆಮಂತ್ರಣ ಪತ್ರಿಕೆ ಫೋಟೋ ವೈರಲ್!

ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಹಸೆಮಣೆ ಏರುವ ಕಾಲು ಕೂಡಿಬಂದಿದ್ದು ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ. 
ಅದಿತಿ ಪ್ರಭುದೇವ-ಯಶಸ್ವಿ
ಅದಿತಿ ಪ್ರಭುದೇವ-ಯಶಸ್ವಿ
Updated on

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಹಸೆಮಣೆ ಏರುವ ಕಾಲು ಕೂಡಿಬಂದಿದ್ದು ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ. 

ಯಶಸ್ವಿ(ಯಶಸ್) ಎಂಬುವವರ ಜೊತೆ ಅದಿತಿ ಕಳೆದ ಡಿಸೆಂಬರ್ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅವರ ಮದುವೆ ನವೆಂಬರ್ 27ರಂದು ನಡೆಯಲಿದೆ. 

ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ 2017ರಲ್ಲಿ ಧೈರ್ಯಂ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದರು. 

ಯಶಸ್ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದು ಅದಿತಿಯನ್ನು ಮೊದಲು ಇಷ್ಟಪಟ್ಟಿದ್ದು ನಂತರ ಕುಟುಂಬಸ್ಥರ ಒಪ್ಪಿಗೆ ನಂತರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com