ಅಭಿಷೇಕ್ ಅಂಬರೀಷ್ ಮದುವೆಗೆ ಡೇಟ್ ಫಿಕ್ಸ್: ಹಸೆಮಣೆ ಏರಲು ಸಜ್ಜಾದ ಜ್ಯೂನಿಯರ್ ರೆಬೆಲ್ ಸ್ಟಾರ್!

ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಹಸೆಮಣೆ ಏರಲು ಅಂಬಿ  ಪುತ್ರ ಸಜ್ಜಾಗಿದ್ದಾರೆ.
ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಅಂಬರೀಷ್
ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಅಂಬರೀಷ್

ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಮದುವೆ ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಅಂಬರೀಶ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ಅಭಿಷೇಕ್- ಅವಿವಾ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಹಸೆಮಣೆ ಏರಲು ಅಂಬಿ  ಪುತ್ರ ಸಜ್ಜಾಗಿದ್ದಾರೆ. ಇದೀಗ ಮದುವೆ ದಿನಾಂಕ ನಿಗದಿಯಾಗಿರುವ ಮಾಹಿತಿ ಸಿಗುತ್ತಿದೆ. ಜೂನ್ 5 ಹಾಗೂ 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿ- ಅವಿವಾ ಹಸೆಮಣೆ ಏರಲಿದ್ದಾರೆ.

ಜೂನ್ 7ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಸದ್ಯ ಆಮಂತ್ರಣ ಪತ್ರಿಕೆ ಫೋಟೊಗಳು ವೈರಲ್ ಆಗ್ರಿದೆ. ಒಟ್ಟಾರೆ ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಸ್ಯಾಂಡಲ್‌ವುಡ್ ಜೊತೆ ಪರಭಾಷಾ ಕಲಾವಿದರು, ರಾಜಕೀಯ ಮುಖಂಡರು ಮದುವೆಗೆ ಹಾಜರಾಗಲಿದ್ದಾರೆ.

ಟ ರೆಬಲ್ ಸ್ಟಾರ್ ಅಂಬರೀಶ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಕಲಾವಿದರ ಜೊತೆಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಬಾಲಿವುಡ್‌ ನಟ ಶತ್ರುಜ್ಞಾ ಸಿನ್ಹಾ, ರಜನಿಕಾಂತ್, ಚಿರಂಜೀವಿ, ಮೋಹನ್‌ ಬಾಬು ಸೇರಿದಂತೆ ಹಲವು ನಟರ ಜೊತೆ ಸ್ನೇಹ ಇತ್ತು. ಇನ್ನು ಸುಮಲತಾ ಕೂಡ ಆಂಧ್ರ ಮೂಲದವರು. ಪರಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಮಿಳು, ತೆಲುಗು, ಮಲಯಾಳಂ ಕಲಾವಿದರ ಜೊತೆ ಉತ್ತಮ ಒಡನಾಟ ಇದೆ. ಅವರೆಲ್ಲರೂ ಅಭಿ- ಅವಿವಾ ಮದುವೆಗೆ ಸಾಕ್ಷಿ ಆಗಲಿದ್ದಾರೆ. ಮಂಡ್ಯದಲ್ಲಿ ಆರತಕ್ಷತೆ, ಬೀಗರೂಟ ಅಂಬರೀಶ್ ಮಂಡ್ಯದವರು.ಆ ಜಿಲ್ಲೆಯ ಜೊತೆ ಅಂಬಿ ಕುಟುಂಬಕ್ಕೆ ಬಹಳ ನಂಟಿದೆ. ಸದ್ಯ ಸುಮಲತಾ ಸಕ್ಕರೆ ನಾಡಿನ ಸಂಸದೆ ಕೂಡ ಆಗಿದ್ದಾರೆ. ಬೆಂಗಳೂರಿನಲ್ಲಿ ಮದುವೆ ನಂತರ ಮಂಡ್ಯದಲ್ಲಿ ಆರತಕ್ಷತೆ ಹಾಗೂ ಬೀಗರ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆಯಂತೆ. ಸುಮಾರು 10 ಸಾವಿರ ಜನ ಇದರಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com