'ಕಲ್ಕಿ 2898 AD' ನಂತಹ ಚಿತ್ರವು ಹೆಚ್ಚು ಸೃಜನಶೀಲ ಕಥೆಯನ್ನು ಹೇಳಲು ದಾರಿ ಮಾಡಿಕೊಡುತ್ತದೆ: ನಟ ಯಶ್

ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರ ಬಗ್ಗೆ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟ ಯಶ್
ನಟ ಯಶ್

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಇತ್ತೀಚಿನ ಚಿತ್ರ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD, ಮೊನ್ನೆ ಜೂನ್ 28 ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಸಮಾನವಾಗಿ ಸೆಳೆದಿದ್ದು, ಚಿತ್ರದ ಅದ್ಭುತ ದೃಶ್ಯಗಳು ಮತ್ತು ಪ್ರದರ್ಶನಗಳಿಗೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ನಟರು ಮತ್ತು ವೀಕ್ಷಕರ ಹೊಗಳಿಕೆಯ ನಡುವೆ, ರಾಕಿಂಗ್ ಸ್ಟಾರ್ ಯಶ್ ಕೂಡ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಸ್ತುತ ಗೀತು ಮೋಹನ್‌ದಾಸ್ ನಿರ್ದೇಶನದ ತನ್ನ ಮುಂದಿನ ದೊಡ್ಡ ಪ್ರಾಜೆಕ್ಟ್ ಟಾಕ್ಸಿಕ್ ತಯಾರಿಯಲ್ಲಿ ನಿರತರಾಗಿರುವ ಯಶ್ ಸೋಷಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾಗ್ ಅಶ್ವಿನ್ ಅವರ ದೃಷ್ಟಿಕೋನ ಮತ್ತು ಕಲ್ಕಿ 2898 AD ಯಲ್ಲಿನ ತಾರಾಗಣವನ್ನು ಹೊಗಳಿದ್ದಾರೆ.

ಯಶ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದ್ದಾರೆ, "ನಟರ ಅದ್ಭುತ ಪ್ರದರ್ಶನ ಮತ್ತು ಅನಿರೀಕ್ಷಿತ ಅತಿಥಿ ಪಾತ್ರಗಳ ಸಂಯೋಜನೆಯು ಮರೆಯಲಾಗದ ಸಿನಿಮೀಯ ಅನುಭವವನ್ನು ಸೃಷ್ಟಿಸುತ್ತದೆ." ಎಂದಿದ್ದಾರೆ. "ಕಲ್ಕಿ 2898 ಎಡಿ ತಂಡವು ದೃಷ್ಟಿಗೋಚರವಾಗಿ ಅದ್ಭುತವಾದ ಚಮತ್ಕಾರವನ್ನು ಸೃಷ್ಟಿಸಿದಕ್ಕಾಗಿ ತಂಡಕ್ಕೆ ಅಭಿನಂದನೆಗಳು! ಈ ಚಿತ್ರವು ಹೆಚ್ಚು ಸೃಜನಶೀಲ ಕಥೆಯನ್ನು ಹೇಳಲು ದಾರಿ ಮಾಡಿಕೊಡುತ್ತದೆ. ನಾಗ್ ಅಶ್ವಿನ್ ಮತ್ತು ವೈಜಯಂತಿ ಫಿಲ್ಮ್ಸ್, ನಿಮ್ಮ ದೃಷ್ಟಿಕೋನ ಮತ್ತು ಧೈರ್ಯವು ಅನೇಕರನ್ನು ದೊಡ್ಡ ಹೆಜ್ಜೆಗಳನ್ನು ಇಡುವಲ್ಲಿ ಪ್ರೇರೇಪಿಸುತ್ತದೆ." ಎಂದು ಬರೆದಿದ್ದಾರೆ.

ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರ ಬಗ್ಗೆ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲ್ಕಿ 2898 AD ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವಿತರಿಸಲಾಗಿದೆ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವು ಸೇರಿ ಸಿನಿಮಾದ ಚಮತ್ಕಾರಕ್ಕೆ ಮತ್ತಷ್ಟು ತಾಂತ್ರಿಕ ಕೌಶಲ್ಯ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com