ಸೋನಲ್ ಮಾಂಟೆರೋ- ತರುಣ್ ಸುಧೀರ್ ಮದುವೆಯ ಮೊದಲ ಪೋಸ್ಟ್: ಕಡೆಗೂ ಬದುಕಿನ ನಿರ್ದೇಶಕ ಸಿಕ್ಕಾಯ್ತು ಎಂದ ನಟಿ!

ನಿರ್ದೇಶಕ ತರುಣ್​ ಸುಧೀರ್​ ಕುರಿತಾಗಿಯೇ ಅವರು ಈ ಪೋಸ್ಟ್ ಶೇರ್​ ಮಾಡಿಕೊಂಡಿರುವುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕೆಂದರೆ, ತರುಣ್​ ಸುಧೀರ್​ ಸಹ ಇದೇ ಪೋಸ್ಟ್​ ಹಂಚಿಕೊಂಡಿದ್ದಾರೆ.
ಸೋನಲ್ ಮಾಂಟೆರೋ
ಸೋನಲ್ ಮಾಂಟೆರೋ
Updated on

ಬೆಂಗಳೂರು: ಕಳೆದ ಕೆಲ ದಿನಗಳಿಂದ ತರುಣ್ ಸುಧೀರ್ ಮತ್ತು ಸೋನಾಲ್ ಮಾಂಟೆರೋ ಮದುವೆ ವಿಚಾರ ಚರ್ಚೆಯಾಗುತ್ತಿದೆ. ರಾಬರ್ಟ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅರಳಿದ ಪ್ರೀತಿ ಈಗ ಮದುವೆಯ ಹಂತಕ್ಕೆ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ.

ಆಗಸ್ಟ್ ನಲ್ಲಿ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ ಅನ್ನುವ ಸುದ್ದಿಯೂ ಇದೆ. ಆಗಸ್ಟ್‌ನಲ್ಲಿ ಮದುವೆ ನಡೆಯುವುದು ಖಚಿತ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದೇ ವೇಳೆ ಈ ವಿಚಾರದ ಬಗ್ಗೆ ಸೋನಲ್​ ಅವರು ಮೌನವಾಗಿದ್ದರು. ಇದೇ ಮೊದಲ ಬಾರಿಗೆ ಅವರು ಮದುವೆ ಕುರಿತು ಮೌನ ಮುರಿದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರೊಂದು ಪೋಸ್ಟರ್​ ಹಂಚಿಕೊಂಡಿದ್ದು, ‘ಕಡೆಗೂ ನಟಿಗೆ ತನ್ನ ಬದುಕಿನ ನಿರ್ದೇಶಕ ಸಿಕ್ಕಾಯ್ತು’ ಎಂಬ ಕ್ಯಾಪ್ಷನ್​ ನೀಡಿದ್ದಾರೆ. ನಿರ್ದೇಶಕ ತರುಣ್​ ಸುಧೀರ್​ ಕುರಿತಾಗಿಯೇ ಅವರು ಈ ಪೋಸ್ಟ್ ಶೇರ್​ ಮಾಡಿಕೊಂಡಿರುವುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕೆಂದರೆ, ತರುಣ್​ ಸುಧೀರ್​ ಸಹ ಇದೇ ಪೋಸ್ಟ್​ ಹಂಚಿಕೊಂಡಿದ್ದಾರೆ.

‘ಕಡೆಗೂ ನಿರ್ದೇಶಕನಿಗೆ ತನ್ನ ಜೀವನದ ನಟಿ ಸಿಕ್ಕಳು’ ಎಂದು ತರುಣ್​ ಸುಧೀರ್​ ಅವರು ಕ್ಯಾಪ್ಷನ್​ ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಂದ ಅಭಿನಂದನೆಯ ಕಮೆಂಟ್​ಗಳು ಹರಿದುಬರುತ್ತಿವೆ. ‘ರಾಬರ್ಟ್​’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಸೋನಲ್​ ಮಾಂತೆರೋ ಮತ್ತು ತರುಣ್​ ಸುಧೀರ್​ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಬಗ್ಗೆ ಅವರು ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

ಸೋನಲ್ ಮಾಂಟೆರೋ
ಸಪ್ತಪದಿ ತುಳಿಯಲಿದ್ದಾರೆ ಕನ್ನಡದ ಖ್ಯಾತ ನಿರ್ದೇಶಕ: ತರುಣ್ ಸುಧೀರ್ ವರಿಸುತ್ತಿರುವ ನಟಿ ಯಾರು?

ಸೋಮವಾರ (ಜುಲೈ 22) ಬೆಳಗ್ಗೆ 11.08 ಗಂಟೆಗೆ ಸೋನಲ್​ ಮಾಂತೆರೋ ಮತ್ತು ತರುಣ್​ ಸುಧೀರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮದುವೆಯ ಬಗ್ಗೆ ವಿಡಿಯೋ ಹಂಚಿಕೊಳ್ಳುವ ನಿರೀಕ್ಷೆ ಇದೆ. ಮದುವೆಯ ದಿನಾಂಕದ ಬಗ್ಗೆಯೂ ಅವರು ಮಾಹಿತಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಜೋಡಿಗೆ ವಿಶ್​ ಮಾಡುತ್ತಿದ್ದಾರೆ.

ದರ್ಶನ್​ ಅವರಿಗೆ ತರುಣ್​ ಸುಧೀರ್​ ಮತ್ತು ಸೋನಲ್​ ಅವರು ಆಪ್ತರು. ಆದರೆ ಮದುವೆಯ ದಿನಾಂಕ ಹತ್ತಿರ ಆಗುತ್ತಿರುವ ಈ ಸಂದರ್ಭದಲ್ಲಿ ದರ್ಶನ್​ ಅವರು ಜೈಲಿನಲ್ಲಿ ಇರುವುದು ಆಪ್ತರಿಗೆ ಬೇಸರ ಮೂಡಿಸಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರಕ್ಕೆ ತೆರಳಿ ತರುಣ್​ ಸುಧೀರ್​ ಅವರು ದರ್ಶನ್​ ಜೊತೆ ಮಾತನಾಡಿ ಬಂದಿದ್ದರು. ಯಾವುದೇ ಕಾರಣಕ್ಕೂ ಮದುವೆಯ ದಿನಾಂಕ ಬದಲಾಯಿಸುವುದು ಬೇಡ ಅಂತ ದರ್ಶನ್​ ಹೇಳಿರುವುದಾಗಿ ತರುಣ್​ ಸುಧೀರ್​ ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೇ ಅವರು ಗುಡ್​ ನ್ಯೂಸ್​ ನೀಡಲು ಸಜ್ಜಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com