ಇನ್‌ಸ್ಟಾಗ್ರಾಮ್‌ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ರಾಕಿಂಗ್ ಸ್ಟಾರ್ Yash ಫಾಲೋ ಮಾಡೋದು ಇವರೊಬ್ಬರನ್ನೇ..! ಯಾರು ಆ ಲಕ್ಕಿ ಗರ್ಲ್?

ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 14 ಮಿಲಿಯನ್‌ಗಿಂತಲೂ (1.4 ಕೋಟಿ) ಹೆಚ್ಚು ಫಾಲೋವರ್ಸ್ ಹೊಂದಿರುವ ಯಶ್, ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
Actor yash
ರಾಕಿಂಗ್ ಸ್ಟಾರ್ ನಟ ಯಶ್
Updated on

ಸ್ಯಾಂಡಲ್‌ವುಡ್‌ನ ಗತ್ತು, ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂಬರುವ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ಸಿನಿಮಾ 'ಟಾಕ್ಸಿಕ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ.

ಈ ಸಿನಿಮಾದ ಪ್ರಚಾರದ ಧೂಳೆಬ್ಬಿಸುತ್ತಿರುವ ಬೆನ್ನಲ್ಲೇ, ಯಶ್ ಅವರ ವೈಯಕ್ತಿಕ ಜೀವನದ ರೋಚಕ ಮತ್ತು ರೋಮ್ಯಾಂಟಿಕ್ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 14 ಮಿಲಿಯನ್‌ಗಿಂತಲೂ (1.4 ಕೋಟಿ) ಹೆಚ್ಚು ಫಾಲೋವರ್ಸ್ ಹೊಂದಿರುವ ಯಶ್, ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಆ ಅದೃಷ್ಟವಂತೆ ಬೇರೆ ಯಾರೂ ಅಲ್ಲ, ಅವರ ಪ್ರೀತಿಯ ಪತ್ನಿ ರಾಧಿಕಾ ಪಂಡಿತ್. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದರೂ, ಡಿಜಿಟಲ್ ಜಗತ್ತಿನಲ್ಲಿ ಪತ್ನಿಯೊಬ್ಬರನ್ನೇ ಫಾಲೋ ಮಾಡುವ ಮೂಲಕ ಯಶ್ ನಿಜ ಜೀವನದ 'ರೋಮ್ಯಾಂಟಿಕ್ ಹೀರೋ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್ ಅವರದ್ದು ಚಿತ್ರರಂಗದ ಮಾದರಿ ದಂಪತಿ. 2007ರಲ್ಲಿ ಪ್ರಸಾರವಾಗುತ್ತಿದ್ದ 'ನಂದ ಗೋಕುಲ' ಎಂಬ ಕನ್ನಡ ಸುಪ್ರಸಿದ್ಧ ಧಾರಾವಾಹಿಯ ಸೆಟ್‌ನಲ್ಲಿ ಇವರಿಬ್ಬರು ಮೊದಲ ಬಾರಿಗೆ ಸಹ-ಕಲಾವಿದರಾಗಿ ಭೇಟಿಯಾಗಿದ್ದರು.

ಆರಂಭದಲ್ಲಿ ಸ್ನೇಹದಿಂದ ಶುರುವಾದ ಇವರ ಜರ್ನಿ, ಬೆಳ್ಳಿ ತೆರೆಯ ಮೇಲೆ 'ಮೊಗ್ಗಿನ ಮನಸು' ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಯಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುವಷ್ಟರಲ್ಲಿ ಪ್ರೀತಿಗೆ ತಿರುಗಿತ್ತು.

ಬಳಿಕ 2016 ರ ಡಿಸೆಂಬರ್‌ನಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಸ್ತುತ ಈ ಕ್ಯೂಟ್ ಜೋಡಿಗೆ ಆಯ್ರಾ (2018 ರಲ್ಲಿ ಜನನ) ಎಂಬ ಮಗಳು ಹಾಗೂ ಯಥರ್ವ್ (2019 ರಲ್ಲಿ ಜನನ) ಎಂಬ ಮಗನಿದ್ದಾನೆ. ಯಶ್ ಸ್ಟಾರ್ ಆಗುವ ಮೊದಲಿನಿಂದಲೂ ಅವರ ಬೆನ್ನಿಗೆ ನಿಂತ ರಾಧಿಕಾ, ಹಣ ಅಥವಾ ಯಶಸ್ಸನ್ನು ನೋಡಿ ತಮ್ಮ ಪ್ರೀತಿಯನ್ನು ಅಳೆದವರಲ್ಲ ಎಂದು ಯಶ್ ಹಳೆಯ ಸಂದರ್ಶನಗಳಲ್ಲಿ ನೆನೆದಿದ್ದಾರೆ.

Actor yash
'Toxic' ಟ್ರೋಲಿಗರಿಗೆ ಯಶ್ ತಿರುಗೇಟು: ಕಾಂಡೋಮ್ ಜಾಹಿರಾತು ಮಾಡೋದಿದ್ರೆ ದುಡ್ಡು ತಗೊಂಡೇ ಮಾಡ್ತೀನಿ, ಉಚಿತವಾಗಲ್ಲ!

ಇತ್ತೀಚೆಗೆ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ಟಾಕ್ ಶೋ 'ಆಪ್ ಕಿ ಅದಾಲತ್' ನಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾದ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಇತ್ತೀಚಿನ "ತಬಾಹಿ" (Tabaahi) ಹಾಡಿನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಜೊತೆಗಿನ ನಿಕಟ (ಇಂಟಿಮೇಟ್) ದೃಶ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ಯಶ್ ಮುಕ್ತವಾಗಿ ಮಾತನಾಡಿದ್ದಾರೆ.

"ಒಬ್ಬ ನಟನಾಗಿ ಇಂತಹ ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ನನಗೆ ವೈಯಕ್ತಿಕವಾಗಿ ತುಂಬಾ ಕಷ್ಟದ ಸವಾಲಾಗಿತ್ತು" ಎಂದು ಯಶ್ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಪತ್ನಿ ರಾಧಿಕಾ ಪಂಡಿತ್ ಅವರ ರಿಯಾಕ್ಷನ್ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಯಾವ ಪತ್ನಿಯೂ ತನ್ನ ಪತಿ ಪರದೆಯ ಮೇಲೆ ಇಂತಹ ದೃಶ್ಯಗಳಲ್ಲಿ ನಟಿಸುವುದನ್ನು ನೋಡಿ ಸಂಭ್ರಮಿಸುವುದಿಲ್ಲ, ರಾಧಿಕಾಗೂ ಇದರಲ್ಲಿ ಪೂರ್ಣ ಖುಷಿಯಿಲ್ಲ. ಆದರೆ, ಅವರು ಸ್ವತಃ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರಿಂದ ಸಿನಿಮಾದ ಅನಿವಾರ್ಯತೆ ಮತ್ತು ವೃತ್ತಿಪರತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.

ನನ್ನ ವೈಯಕ್ತಿಕ ಜೀವನ ಹಾಗೂ ಸಿನಿಮಾದ ಪಾತ್ರದ ನಡುವೆ ಇರುವ ವ್ಯತ್ಯಾಸವನ್ನು ಗೌರವಿಸುತ್ತಾರೆ. ನಮ್ಮ ನಡುವಿನ ನಂಬಿಕೆಯೇ ಇದಕ್ಕೆ ಕಾರಣ" ಎಂದು ಹೇಳುವ ಮೂಲಕ ದಂಪತಿಗಳ ನಡುವಿನ ಗಾಢವಾದ ತಿಳುವಳಿಕೆಯನ್ನು ಬಿಚ್ಚಿಟ್ಟಿದ್ದಾರೆ.

ಒಟ್ಟಾರೆಯಾಗಿ, ರೀಲ್ ಲೈಫ್‌ನಲ್ಲಿ ಎಷ್ಟೇ ರಗಡ್ ಆಗಿ ಕಂಡರೂ, ರಿಯಲ್ ಲೈಫ್‌ನಲ್ಲಿ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಯಶ್ ಅವರ ಈ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com