ಮಾನ್ಯತೆ ಪಡೆಯದ ಮಹಾವಿದ್ಯಾಲಯದ ಮೋಸ
2006-07ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗವು ದಿನಾಂಕ 11-09-2006ರಂದು ಸ್ಥಾಪನೆಗೊಂಡಿತು. ಸುದೀರ್ಘ ಎಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಹಾವಿದ್ಯಾಲಯವು ಸೂಕ್ತ ಮಾನ್ಯತೆ ಪಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ.
2009-10ನೇ ಸಾಲಿನಲ್ಲಿ ಮಹಾವಿದ್ಯಾಲಯಕ್ಕೆ ಆಗಮಿಸಿದ ಪಶುವೈದ್ಯಕೀಯ ಪರಿಷತ್ತಿನ ತ್ರಿಸದಸ್ಯ ತನಿಖಾ ತಂಡವು ಮಹಾವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಕಾಲೇಜಿಗೆ ಮಾನ್ಯತೆ ನೀಡದಿರಲು 'ಭಾರತೀಯ ಪಶುವೈದ್ಯಕೀಯ ಪರಿಷತ್ತಿಗೆ' ಶಿಫಾರಸ್ಸು ಮಾಡಿತ್ತು. ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿದ್ದದ್ದು ಕೇವಲ ತಾತ್ಕಾಲಿಕ ಕಾಲೇಜು ಕಟ್ಟಡದಲ್ಲಿನ ವಿವಿಧ ವಿಭಾಗಗಳು. ತಾತ್ಕಾಲಿಕ ಚಿಕಿತ್ಸಾ ಭೋದನಾ ವಿಭಾಗ, ಶಾಶ್ವತ ವಸತಿ ನಿಲಯಗಳು, ಶಾಶ್ವತ ಬಿ, ಸಿ/ ಡಿ ಮಾದರಿಯ ವಸತಿ ಗೃಹಗಳ ಸಮುಚ್ಛಯಗಳು ಮಾತ್ರ. ನಂತರದ ಸೌಕರ್ಯಗಳ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳು ಪೂರಕ ಕೆಲಸಗಳನ್ನು ಮಾಡುವಲ್ಲಿ ವಿಫಲಗೊಂಡಿವೆ. ಇದೇ ಸಂದರ್ಭದಲ್ಲಿ ಶಾಸಕರ ಹಾಗೂ ಸಚಿವರುಗಳ ಭೇಟಿಗಳು ಪರಿಣಾಮಕಾರಿಯಾಗಿರುವುದಿಲ್ಲ. ತಾತ್ಕಾಲಿಕ ನಿರ್ಮಾಣಗಳಿಗೆ ಪರಿಹಾರವೆಂಬಂತೆ 2010ರಲ್ಲಿ ಪ್ರಾರಂಭಗೊಂಡ ಮುಖ್ಯ ಕಾಲೇಜು ಕಟ್ಟಡದ ಕಾಮಗಾರಿಯು 3 ವರ್ಷಗಳ ಸುದೀರ್ಘ ಕಾಲಾವಧಿಯ ನಂತರವೂ ಕೇವಲ ತನ್ನ ಕೆಳ ಅಂತಸ್ತಿನ ನಿರ್ಮಾಣವನ್ನು ಕೈಗೊಂಡು ಉಳಿದ ಕಾಮಗಾರಿಗಳಲ್ಲಿ ವಿಫಲಗೊಂಡಿದೆ.
2012-13ನೇ ಸಾಲಿನ ಫೆಬ್ರವರಿ ತಿಂಗಳಲ್ಲಿ ಕಾಲೇಜಿಗೆ ಆಗಮಿಸಿದ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ತ್ರಿಸದಸ್ಯ ತನಿಖಾ ತಂಡವು ಮಹಾವಿದ್ಯಾಲಯದಲ್ಲಿನ 18 ನ್ಯೂನ್ಯತೆಗಳನ್ನು ನಮೂದಿಸಿ ವರದಿಯನ್ನು ಸಲ್ಲಿಸಿರುತ್ತದೆ. ಈ ವರದಿ ಆಧರಿಸಿ ಭಾರತೀಯ ಪಶುವೈದ್ಯಕೀಯ ಪರಿಷತ್ತು 2013-14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರಲು ಆದೇಶಿಸಿದೆ.
ಫೆಬ್ರವರಿ ತಿಂಗಳಿಂದ ಆಗಸ್ಟ್ವರೆಗಿನ 6 ತಿಂಗಳ ಅಮೂಲ್ಯ ಕಾಲಾವಧಿಯಲ್ಲಿ ಮಹಾವಿದ್ಯಾಲಯದ ಬೆಳವಣಿಗೆಗೆ ಸರ್ಕಾರದ ಸಂಪೂರ್ಣ ಬೆಂಬಲ ಹಾಗೂ ಸಹಕಾರಗಳ ನಡುವೆಯೂ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಯಾವುದೇ ಗುಣಾತ್ಮಕ ಬೆಳವಣಿಗೆಗಳು ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಕೆಲವೇ ತಿಂಗಳುಗಳಲ್ಲಿ ಪದವಿ ಮುಗಿಸಿ ಕಾಲೇಜಿನಿಂದ ಹೊರ ಹೋಗಲಿರುವ ವಿದ್ಯಾರ್ಥಿಗಳು ಹಾಗೂ ಮುಂಬರುವ ಶೈಕ್ಷಣಿಕ ವರ್ಷಗಳಲ್ಲಿ ಪದವಿ ಮುಗಿಸಿ ಹೊರಬರಲಿರುವ ವಿದ್ಯಾರ್ಥಿಗಳ ಭವಿಷ್ಯ ಸಂಪೂರ್ಣ ಗೊಂದಲಮಯವಾಗಿದೆ. ಪ್ರತೀ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುವಾಗಲಾಗಲಿ, ಪ್ರವೇಶ ಮಾಡಿಕೊಳ್ಳುವಾಗಲಾಗಲೀ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮಾನ್ಯತೆ ಇಲ್ಲದ ಕುರಿತು ಎಲ್ಲಿಯೂ ನಮೂದಿಸದೆ ವಿದ್ಯಾರ್ಥಿಗಳಿಗೆ ಮೋಸ ಮಾಡಿ ಪ್ರವೇಶ ಮಾಡಿಕೊಂಡಿದೆ. ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಮೊದಲು ವಿದ್ಯಾರ್ಥಿಗಳು ವಿವಿಧ ಪದವಿ ಕಾಲೇಜುಗಳಲ್ಲಿ ಸೀಟು ಪಡೆದುಕೊಂಡಿದ್ದರು. ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾಖಲಾದ ಬಹುತೇಕ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾರೆ. ಆದರೆ ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಮಾನ್ಯತೆ ಇಲ್ಲದ ಕುರಿತು ಯಾವುದೇ ಸುಳಿವನ್ನು ನೀಡದೇ ವಿದ್ಯಾರ್ಥಿಗಳನ್ನು ವಂಚಿಸಲಾಗಿದೆ.
ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ರೈತಾಪಿ ಕುಟುಂಬಗಳಿಂದ ಬಂದಿದ್ದು, ಭವಿಷ್ಯದ ದಾರಿ ತೋಚದಂತಾಗಿದೆ. ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳ ಈ ಬೇಜವಾಬ್ದಾರಿಯಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಬಳಲುವಂತಾಗಿದೆ ಹಾಗೂ ದೈನಂದಿನ ಪಠ್ಯಕ್ರಮಗಳಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿಗಳಷ್ಟೇ ಅಲ್ಲದೇ ಪೋಷಕರೂ ಸಹ ನಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ವಿವಿಧ ವಲಯಗಳಲ್ಲಿ ಪಶುವೈದ್ಯರಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದ್ದು ನೋಂದಣಿ ಸಂಖ್ಯೆ ಇಲ್ಲದೇ ಯಾವುದೇ ವಲಯಗಳಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ ಹಾಗೂ 5 ವರ್ಷಗಳ ವ್ಯಾಸಂಗ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಈಐ ಮುಖಾಂತರ ಶಾಶ್ವತ ಪರಿಹಾರವನ್ನು (ಪದವಿ ಮುಗಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಯಾವುದೇ ರೀತಿಯ ನಿಬಂಧನೆ ಇಲ್ಲದೆ ಶಾಶ್ವತ ಐಗಈ ನೋಂದಣಿ) ಲಿಖಿತರೂಪದಲ್ಲಿ ಕೊಡಿಸಬೇಕು ಹಾಗೂ ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶಾಶ್ವತ ಐಗಈ ನೋಂದಣಿ ದೊರಕುವಂತೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.
- ವಿದ್ಯಾರ್ಥಿಗಳು,
ಪಶುವೈದ್ಯಕೀಯ ಮಾಹಾವಿದ್ಯಾಲಯ,
ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

