

ಚೆನ್ನೈ: ಭಾರತ ಕ್ರಿಕೆಟ್ ತಂಡ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಎರಡನೇ ಮಗುವಿದೆ ತಂದೆಯಾಗಿದ್ದು, ಪತ್ನಿ ಪ್ರೀತಿ ಅಶ್ವಿನ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರೀತಿ ಅಶ್ವಿನ್ ಅವರು ಡಿಸೆಂಬರ್ 21 ರಂದೇ ಮಗುವಿದೆ ಜನ್ಮ ನೀಡಿದ್ದರು. ಆದರೆ, ಈ ವಿಚಾರವನ್ನು ಇದೀಗ ಟ್ವಿಟರ್ ನಲ್ಲಿ ಬಹಿರಂಗಪಡಿಸಲಾಗಿದೆ.
ಡಿ.20ರಂದು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಆಡಿದ ಅಂತಿಮ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತ್ತು. ಈ ಸರಣಿಯಲ್ಲಿ ಅಶ್ವಿನ ಅವರ ಪ್ರದರ್ಶನ ಸರ್ವ ಶ್ರೇಷ್ಠವಾಗಿತ್ತು. ಪಂದ್ಯದ ಬಳಿಕ ಅಶ್ವಿನ್ ಅವರನ್ನು ಸಾಕಷ್ಟು ಜನರು ಕೊಂಡಾಡಿದ್ದರು. ಟೆಸ್ಟ್ ಮುಗಿದ ಮರುದಿನ ಡಿ.21 ರಂದು ಅಶ್ವಿನ್ ಅವರು ಎರಡನೇ ಮಗುವಿಗೆ ತಂದೆಯಾಗಿದ್ದರು.
ಪ್ರೀತಿ ಅಶ್ವಿನ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ವಿಚಾರವನ್ನು ಎಲ್ಲಿಯೂ ಅಶ್ವಿನ್ ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಪತಿ ಹಾಗೂ ಪತ್ನಿ ಇಬ್ಬರು ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಇದೀಗ ಗುಟ್ಟನ್ನು ಪ್ರೀತಿ ಅಶ್ವಿನ್ ಅವರು ಬಹಿರಂಗಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಗುಟ್ಟನ್ನು ಬಹಿರಂಗ ಪಡಿಸಿರುವ ಪ್ರೀತಿ ಅಶ್ವಿನ್ ಅವರು, ಅಶ್ವಿನ್ ಅವರ ಅದ್ಭುತ ಪ್ರದರ್ಶನದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಷ್ಟವಿರಲಿಲ್ಲ. ಹೀಗಾಗಿ ವಿಚಾರವನ್ನು ಮುಚ್ಚಿಡಲಾಗಿತ್ತು.
ನಮ್ಮ ಮುದ್ದಿನ ಮಗಳು ಜಗತ್ತಿಗೆ ಕಾಲಿಟ್ಟಿರುವ ವಿಚಾರವನ್ನು ತಿಳಿಸಲು ಐದು ದಿನ ಕಾದಿದೆ. ಕ್ಯಾರಂ ಬೇಬಿ 2ಗೆ ಜನ್ಮ ನೀಡಿದ್ದೇನೆ. ಸೈಕ್ಲೋನ್ ಹಾಗೂ ಚೆನ್ನೈ ಟೆಸ್ಟ್ ಮುಕ್ತಾಯಗೊಳ್ಳುವವರೆಗೂ ಕಾದು. ನಂತರ ಪ್ರಪಂಚಕ್ಕೆ ಬಂದಿದ್ದಾಳೆಂದು ಪ್ರೀತಿ ಅಶ್ವಿನ್ ಅವರು ಪ್ರೀತಿಯಿಂದ ಹೇಳಿಕೊಂಡಿದ್ದಾರೆ.
Advertisement