2ನೇ ಟಿ20: ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾಗೆ ರೋಚಕ ಜಯ

ಜೋಹಾನ್ಸ್ ಬರ್ಗ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಗಳ ರೋಚಕ ಜಯ ಸಾಧಿಸಿತು...
ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಆಸಿಸ್ (ಸಂಗ್ರಹ ಚಿತ್ರ)
ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಆಸಿಸ್ (ಸಂಗ್ರಹ ಚಿತ್ರ)
Updated on

ಜೊಹಾನ್ಸ್ ಬರ್ಗ್: ಜೋಹಾನ್ಸ್ ಬರ್ಗ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

ಟಾಸ್ ಸೋತು ಬ್ಯಾಟಿ೦ಗ್ ಇಳಿದ ದಕ್ಷಿಣ ಆಫ್ರಿಕಾ ತಂಡ, ಫಾಫ಼್ ಡು ಪ್ಲೆಸಿಸ್(79 ರನ್) ಅವರ ಬಿರುಸಿನ ಬ್ಯಾಟಿ೦ಗ್‍ನಿ೦ದ 7 ವಿಕೆಟ್‍ಗೆ 204 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ ಈ  ಸವಾಲು ಬೆನ್ನಟ್ಟಿದ ಆಸೀಸ್ ಬಳಗ, ಆರ೦ಭೀಕ ಆಘಾತದ ನಡುವೆಯೂ ವಾನ೯ರ್‍ ಮತ್ತು ಮ್ಯಾಕ್ಸ್ ವೆಲ್ ಜೋಡಿಯ ಅಬ್ಬರದಾಟದಿ೦ದ ಕೊನೇ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.

ಇದರಿ೦ದ ಆಸ್ಟ್ರೇಲಿಯಾ ತಂಡ 3 ಪ೦ದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಬುಧವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯ ನಿರ್ಣಾಯಕವಾಗಿದ್ದು, ಸರಣಿ  ಯಾರ ವಶವಾಗಲಿದೆ ಎಂದು ಕಾದು ನೋಡಬೇಕಿದೆ. ಇನ್ನು ನಾಳೆಯಿಂದ ಐಸಿಸಿ ಟಿ20 ವಿಶ್ವಕಪ್ ಸರಣಿ ಆರಂಭವಾಗಲಿಗದ್ದು, ಉಭಯ ತಂಡಗಳಿಗೆ ಈ ಸರಣಿ ಮಹತ್ವದಾಗಿದೆ.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 7 ವಿಕೆಟ್‍ಗೆ 204 (ಪ್ಲೆಸಿಸ್ 79, ಡಿಕಾಕ್ 44, ಮಿಲ್ಲರ್ 33, ವಿಲಿಯರ್ಸ್ 13)
ಬೌಲಿಂಗ್: ಫೌಲ್ಕ್ ನರ್ 28ಕ್ಕೆ 3, ಹೇಸ್ಟಿ೦ಗ್ಸ್ 42ಕ್ಕೆ 2
ಆಸ್ಟ್ರೇಲಿಯಾ: 20 ಓವರ್‍ಗಳಲ್ಲಿ 5 ವಿಕೆಟ್‍ಗೆ 205 (ವಾನ೯ರ್ 77, ಮ್ಯಾಕ್ಸ್ ವೆಲ್ 75, ಫೌಲ್ಕನರ್ 7*, ಮಿಚೆಲ್ ಮಾಷ್‍೯ 2*)
ಬೌಲಿಂಗ್ ರಬಡ 25ಕ್ಕೆ 2, ಸ್ಟೆ„ನ್ 32ಕ್ಕೆ 2

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com