ನವದೆಹಲಿ: ಕಳೆದ ಬುಧವಾರ ಟಿ 20 ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 1 ರನ್‌ನಿಂದ ಪರಾಭವಗೊಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೇ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ 'ಕ್ಲಾಸ್' ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಇದೀಗ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದ ಮುನ್ನ ಪತ್ರಕರ್ತರೊಬ್ಬರು ಕೇಳಿದ ಕಿರಿಕ್ ಪ್ರಶ್ನೆಗೆ ಧೋನಿ ತಕ್ಕ ಉತ್ತರ ನೀಡಿರುವ ಪ್ರಸಂಗ ನಡೆದಿದೆ.
ಶನಿವಾರ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಪೂರ್ವಭಾವಿಯಾಗಿ ಅಭ್ಯಾಸ ನಿರತವಾಗಿತ್ತು. ಆ ವೇಳೆ ಧೋನಿ ಅಲ್ಲಿ ಫುಟ್ಬಾಲ್ ಆಡುತ್ತಿದ್ದರು.
ಅದನ್ನು ನೋಡಿದ ಪತ್ರಕರ್ತರ ಗುಂಪಿನಲ್ಲಿದ್ದ ಒಬ್ಬ ವರದಿಗಾರ, ಕ್ರಿಕೆಟ್ ಆಡ್ತೀರಾ? ಎಂದು ವ್ಯಂಗ್ಯವಾಗಿ ಕೇಳಿದರು.
ಇದಕ್ಕೆ ಧೋನಿ, ನಿಮಗೆ ಆಡಲು ಸಾಧ್ಯವಾಗುತ್ತಿದ್ದರೆ, ಇವತ್ತು ನೀವಿಲ್ಲಿ ಮತ್ತು ನಾನು ಅಲ್ಲಿ ಇರುತ್ತಿದ್ದೆ ಎಂದು ಉತ್ತರಿಸಿದ್ದಾರೆ.