ಟ್ವಿಟರ್ ನಲ್ಲಿ ಬಿಗ್ ಬಿ-ಫ್ಲಿಂಟಾಫ್ ಫೈಟ್ ಹೇಗಿತ್ತು ಗೊತ್ತಾ?

ಕೊಹ್ಲಿ ವಿಚಾರವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಇಂಗ್ಲೆಂಡ್ ನ ಮಾಜಿ ಆಲ್​ರೌಂಡರ್ ಫ್ಲಿಂಟಾಪ್ ನಡುವಿನ ಟ್ವಿಟರ್ ವಾರ್ ಇದೀಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ ಮತ್ತು ಫ್ಲಿಂಟಾಫ್ (ಸಂಗ್ರಹ ಚಿತ್ರ)
ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ ಮತ್ತು ಫ್ಲಿಂಟಾಫ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ನಾಕೌಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟಕ್ಕೆ ಇಡೀ ವಿಶ್ವವೇ ತಲೆಬಾಗಿ, ಕ್ರಿಕೆಟ್ ದಿಗ್ಗಜರು ಕೂಡ ಮುಕ್ತ ಕಂಠದಿಂದ ಶ್ಲಾಘಿಸಿರುವುದು ಗೊತ್ತಿರುವ ಸಂಗತಿ.  ಆದರೆ ಇದೇ ಕೊಹ್ಲಿ ವಿಚಾರವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಇಂಗ್ಲೆಂಡ್ ನ ಮಾಜಿ ಆಲ್​ರೌಂಡರ್ ಫ್ಲಿಂಟಾಪ್ ನಡುವಿನ ಟ್ವಿಟರ್ ವಾರ್ ಇದೀಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಫ್ಲಿಂಟಾಫ್ ಅವರ ನಡುವಿನ ಟ್ವಿಟರ್ ವಾರ್ ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಸರ್ ಜಡೇಜಾ ಹೆಸರಿನಲ್ಲಿರುವ ಕ್ರಿಕೆಟ್ ಅಭಿಮಾನಿಯ  ಆಗಮನದೊಂದಿಗೆ ಈ ಟ್ವಿಟರ್ ವಾರ್ ಮತ್ತಷ್ಟು ರೋಚಕತೆ ಪಡೆದುಕೊಂಡಿತ್ತು. ಆಸಿಸ್ ವಿರುದ್ಧ ಭಾರತ ಗೆಲುವು ಸಾಧಿಸಿದ ಬಳಿಕ ಕೊಹ್ಲಿ ಆಟವನ್ನು ಶ್ಲಾಘಿಸಿ ಫ್ಲಿಂಟಾಫ್ ಹಾಕಿದ್ದ ಟ್ವಿಟರ್ ಸ್ಟೇಟಸ್ ಗೆ ಬಿಗ್ ಅಮಿತಾಬ್ ಟಾಂಗ್ ನೀಡಿದ್ದರು.

ಫ್ಲಿಂಟಾಫ್ ತಮ್ಮ ಟ್ವೀಟ್ ನಲ್ಲಿ ವಿರಾಟ್ ಕೊಹ್ಲಿ ಜೋ ರೂಟ್ ನಷ್ಟೇ ಸಾಮರ್ಥ್ಯ ಹೊಂದಿದ್ದಾರೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಬಿಗ್ ಬಿ ಅಮಿತಾಬ್, ಯಾರು ಈ  ರೂಟ್.. ಅವರನ್ನು ಬುಡಸಮೇತ ಕಿತ್ತುಹಾಕುತ್ತೇವೆ ಎಂದು ಟಾಂಗ್ ನೀಡಿದ್ದರು. ಈ ಟ್ವೀಟ್ ಬರುತ್ತಿದ್ದಂತೆಯೇ ಫ್ಲಿಂಟಾಫ್ ಬಿಗ್ ಬಿ ಅಮಿತಾಬ್ ಬಚ್ಚನ್ ರನ್ನು ಯಾರು ನೀವು..? ಎಂದು ಕೇಳುವ ಮೂಲಕ ಮತ್ತೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಆಗ ಈ ಟ್ವಿಟರ್ ವಾರ್ ಗೆ ಎಂಟ್ರಿ ಕೊಟ್ಟ ಸರ್ ಜಡೇಜಾ ಹೆಸರಿನ ಕ್ರಿಕೆಟ್ ಅಭಿಮಾನಿ, "ವಯಸ್ಸಿನಲ್ಲಿ ಅವರು ನಿನ್ನ ಅಪ್ಪನಂತೆ..ಹೆಸರು ಶೆಹನ್ ಷಾ" ಎಂದು ಉತ್ತರ ನೀಡಿದ್ದರು.

ಕ್ರಿಕೆಟ್ ಮತ್ತು ಬಾಲಿವುಡ್ ದಿಗ್ಗಜರ ಈ ಟ್ವೀಟ್ ವಾರ್ ಇದೀಗ ವೈರಲ್ ಆಗಿದ್ದು, ಮಾಧ್ಯಮ-ಪತ್ರಿಕೆಗಳಲ್ಲಿ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಟ್ವಿಟರ್ ನಲ್ಲಿ ಈ ಹಾಸ್ಯಾಸ್ಪದ ಟ್ವೀಟ್ ವಾರ್ ಇಲ್ಲಿದೆ ನೋಡಿ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com