ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಸೋಲು: ಆರ್ಸಿಬಿ ಪ್ಲೇ ಆಫ್ ಕನಸು ಕಗ್ಗಂಟು

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳಿಂದ ಜಯ ಗಳಿಸಿದ್ದು, ಆರ್ಸಿಬಿ ಪ್ಲೇ ಆಫ್ ಕನಸು ಕಗ್ಗಂಟಾಗಿದೆ...
ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್
Updated on: 

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳಿಂದ ಜಯ ಗಳಿಸಿದ್ದು, ಆರ್ಸಿಬಿ ಪ್ಲೇ ಆಫ್ ಕನಸು ಕಗ್ಗಂಟಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಸೋತು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. 152 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಇನ್ನು 8 ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿದೆ.

ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 25, ಪಾರ್ಥಿವ್ ಪಟೇಲ್ 1, ಅಂಬಟ್ಟಿ ರಾಯುಡು 44, ರಾಣಾ 9, ಪೋಲಾರ್ಡ್ ಅಜೇಯ 35 ಹಾಗೂ ಬಟ್ಲರ್ 29 ರನ್ ಗಳನ್ನು ಗಳಿಸಿದ್ದಾರೆ.

ಆರ್ಸಿಬಿ ಪರ ಅರೋನ್ 2, ಅರವಿಂದ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಆರ್ಸಿಬಿ ಪರ ವಿರಾಟ್ ಕೊಹ್ಲಿ 7, ಕ್ರಿಸ್ ಗೇಯ್ಲ್ 5, ಎಬಿಡಿ 24, ಕೆಎಲ್ ರಾಹುಲ್ ಅಜೇಯ 68, ವಾಟ್ಸನ್ 15, ಸಚಿನ್ ಬೇಬಿ ಅಜೇಯ 25 ರನ್ ಗಳಿಸಿದ್ದಾರೆ.

ಮುಂಬೈ ಪರ ಟೀಮ್ ಸೌಥಿ, ಮೆಕ್ಲೆನಗನ್ ಹಾಗೂ ಪಾಂಡ್ಯಾ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com