

ಮುಂಬೈ: ಕ್ರಿಕೆಟ್ ಇತಿಹಾಸದ ಸುಮಾರು 32 ವರ್ಷಗಳಷ್ಟು ಹಳೆಯ ಘಟನೆಗೆ ಸಂಬಂಧಿಸಿದಂತೆ ಇದೀಗ ಖ್ಯಾತ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸ್ಪಷ್ಟನೆ ನೀಡಿದ್ದು, 1984ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಕಪಿಲ್ ದೇವ್ ರನ್ನು ಕೈಬಿಡುವಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ.
1984ರ ಡಿಸೆ೦ಬರ್ ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇ೦ಗ್ಲೆ೦ಡ್ ವಿರುದ್ಧದ ಈಡನ್ ಗಾಡ೯ನ್ಸ್‍೯ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯಕ್ಕೆ ವಿಶ್ವಕಪ್ ವಿಜೇತ ತ೦ಡದ ನಾಯಕ ಕಪಿಲ್ ದೇವ್‍ರನ್ನು ದಿಢೀರನೆ ಕೈಬಿಡಲಾಗಿತ್ತು. ಈ ನಿಧಾ೯ರದ ಹಿ೦ದೆ ಸುನೀಲ್ ಗಾವಸ್ಕರ್ ಕೈವಾಡವಿದೆ ಎ೦ದು ಸುದ್ದಿಹಬ್ಬಿತ್ತು. ಆದರೆ ಅಂದು ಈ ಊಹಾಪೋಹಗಳಿಗೆ ಕಿವಿಕೊಟ್ಟಿರದ ಗವಾಸ್ಕರ್ ಸತತ 32 ವರ್ಷಗಳ ಬಳಿಕ ಈ ಘಟನೆಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ತಂಡದಿಂದ ಕಪಿಲ್ ದೇವ್ ರನ್ನು ಕೈಬಿಟ್ಟ ವಿಚಾರದಲ್ಲಿ ತಮ್ಮ ಯಾವುದೇ ಪಾತ್ರವಿರಲಿಲ್ಲ ಎ೦ದು ಗಾವಸ್ಕರ್ ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅದೇ ಟೆಸ್ಟ್ ಸರಣಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ನ 5ನೇ ದಿನ ಭಾರತ ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದ ವೇಳೆ ಕಪಿಲ್, ಕೆಟ್ಟ ಶಾಟ್ ಬಾರಿಸಿ ಔಟಾಗಿದ್ದರು. ಇದರಿ೦ದಾಗಿ ಭಾರತ ಆ ಟೆಸ್ಟ್ ನಲ್ಲಿ ಸೋಲು ಕ೦ಡಿತ್ತು. ಆ ಪಂದ್ಯದ ಗೆಲುವಿನ ನೆರವಿನಿಂದಾಗಿ ಇ೦ಗ್ಲೆ೦ಡ್, ಸರಣಿ ಗೆದ್ದು ಬೀಗಿತ್ತು. ಆದರೆ ಪಂದ್ಯದ ರೋಚಕ ಘಟದಲ್ಲಿ ಕೆಟ್ಟ ಶಾಟ್ ಆಯ್ಕೆ ಮಾಡಿಕೊಂಡು ಪರೋಕ್ಷವಾಗಿ ತಂಡದ ಸೋಲಿಗೆ ಕಾರಣರಾಗಿದ್ದ ಕಪಿಲ್ ದೇವ್ ಅವರ ವಿರುದ್ಧ ಆಯ್ಕೆಗಾರರು ಸಿಟ್ಟಾಗಿದ್ದು, ಇದೇ ಕಾರಣಕ್ಕಾಗಿ ಕಪಿಲ್ ದೇವ್ ರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ತಂಡದ ನಿರ್ಧಾರದ ಹಿಂದೆ ಸುನಿಲ್ ಗವಾಸ್ಕರ್ ಅವರ ಕೈವಾಡ ಕೂಡ ಇತ್ತು. ಕಪಿಲ್ ಕೆಟ್ಟ ಆಟದಿಂದ ಆಕ್ರೋಶಗೊಂಡಿದ್ದ ಗವಾಸ್ಕರ್ ಅವರನ್ನು ತಂಡದಿಂದ ಕೈಬಿಟ್ಟಿದ್ದರು ಎಂದು ಊಹಾಪೋಹಗಳು ಹರಿದಾಡಿದ್ದವು.
ಆದರೆ ಈ ಬಗ್ಗೆ ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಿರುವ ಗವಾಸ್ಕರ್, "ಭಾರತ ತ೦ಡದ ನಾಯಕರಾಗಿದ್ದರೂ, ಆಯ್ಕೆ ಸಮಿತಿ ಸಭೆಯಲ್ಲಿ ನಮಗೆ ಯಾವುದೇ ಅಧಿಕಾರವಿರುವುದಿಲ್ಲ. ನಾವು ಅಲ್ಲಿನ ಒಬ್ಬ ಸದಸ್ಯರಾಗಿರುತ್ತೇವೆ ಅಷ್ಟೇ. ಅ೦ದು ನಾನು ಸಭೆಗೆ ಆಗಮಿಸುವ ಮುನ್ನವೇ ಕಪಿಲ್‍ರನ್ನು ತ೦ಡದಿ೦ದ ಕೈಬಿಡುವ ನಿಧಾ೯ರ ಮಾಡಲಾಗಿತ್ತು. ನಾನು 20 ನಿಮಿಷ ತಡವಾಗಿ ಸಭೆಗೆ ಹಾಜರಾಗಿದ್ದೆ. ತ೦ಡದ ಉತ್ತಮ ಆಟಗಾರ ಹಾಗೂ ಮ್ಯಾಚ್ ವಿನ್ನರ್ ರನ್ನು ಕೈಬಿಡುವ ಮೂಖ೯ ನಿಧಾ೯ರವನ್ನು ಯಾವ ನಾಯಕನೂ ಮಾಡುವುದಿಲ್ಲ' ಎ೦ದು ಗವಾಸ್ಕರ್ ಹೇಳಿದ್ದಾರೆ.
ಪಂದ್ಯದ ಸಂಭಾವನೆಗೂ ಕತ್ತರಿ ಹಾಕಿದ್ದ ಆಯ್ಕೆಗಾರರು
ಇದೇ ವೇಳೆ ಮತ್ತೊಂದು ರೋಚಕ ಅಂಶವನ್ನು ಸುನಿಲ್ ಗವಾಸ್ಕರ್ ಹೊರಹಾಕಿದ್ದು, ಕಪಿಲ್ ವಿರುದ್ಧ ಆಕ್ರೋಶಗೊಂಡಿದ್ದ ಆಯ್ಕೆಗಾರರು ಅವರನ್ನು ಪಂದ್ಯದಿಂದ ಕೈಬಿಡುವುದಷ್ಟೇ ಅಲ್ಲ, ಅವರ ಪಂದ್ಯದ ಸಂಭಾವನೆಯನ್ನೂ ಕೂಡ ಕಟ್ ಮಾಡಿದ್ದರು. ಮುಂದಿನ ದಿನಗಳಲ್ಲಿ ಆ ಆಯ್ಕೆಗಾರರು ಯಾರು ಎಂದು ತಾವು ಹೇಳಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.