

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಾಯೋಗಿಕವಾಗಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ(ಯುಡಿಆರ್‌ಎಸ್)ಯನ್ನು ಬಳಸಲಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದೇನು ಬ್ರಹ್ಮವಿದ್ಯೆಯಲ್ಲ ಎಂದು ಹೇಳಿದ್ದಾರೆ.
ಡಿಆರ್ಎಸ್ ಬ್ರಹ್ಮವಿದ್ಯೆಯಲ್ಲ ಎಂದು ಹೇಳಿರುವ ವಿರಾಟ್ ಕೊಹ್ಲಿ, ಓರ್ವ ಕ್ರಿಕೆಟಿಗನಿಗೆ ಸುಲಭವಾಗಿ ಅರ್ಥವಾಗುತ್ತದೆ. ಬಾಲ್ ಪ್ಯಾಡ್ ಗೆ ಬಿತ್ತ. ಲೈನ್ ಅಂಡ್ ಲೆನ್ತ್ ಸರಿಯಾಗಿತ್ತ ಎಂಬುದು ಕ್ರಿಕೆಟ್ ಮೂಲಭೂತ ವಿಷಯ. ಹೀಗಾಗಿ ಡಿಆರ್ಎಸ್ ತಂತ್ರಜ್ಞಾನ ಬಳಕೆ ಅನವಶ್ಯಕ ಎಂದು ಹೇಳಿದ್ದಾರೆ.
ಡಿಆರ್‌ಎಸ್ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಟಿವಿಗಳಲ್ಲಿ ನೋಡಿರುತ್ತೇವೆ. ಇಲ್ಲಿ ಸಾಮಾನ್ಯವಾಗಿ ಬೌಲರ್ ಹಾಗೂ ವಿಕೆಟ್ ಕೀಪರ್ ಮುಖ್ಯವಾಗಿರುತ್ತಾರೆ. ಡಿಆರ್‌ಎಸ್ ಬಳಕೆ ಅಂಪೈರ್ ತೀರ್ಮಾನಕ್ಕೆ ಒಂದು ಪರ್ಯಾಯ ವ್ಯವಸ್ಥೆಯಷ್ಟೇ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನವೆಂಬರ್ 9ರಿಂದು ರಾಜ್ ಕೋಟ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭವಾಗಲಿದ್ದು ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಾಯೋಗಿಕವಾಗಿ ಡಿಆರ್‌ಎಸ್ ತಂತ್ರಜ್ಞಾನ ಬಳಸುತ್ತಿದೆ.