ವೇಗಿ ಉಮೇಶ್ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರ, 9 ವಿಕೆಟ್ ನಷ್ಟಕ್ಕೆ 256 ರನ್

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟ ಅಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದೆ...
ಉಮೇಶ್ ಯಾದವ್
ಉಮೇಶ್ ಯಾದವ್
Updated on: 
ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟ ಅಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದೆ. 
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದೆ. 
ಭಾರತದ ಮಾರಕ ಬೌಲಿಂಗ್ ದಾಳಿಯನ್ನು ಎದುರಿಸಲು ಆಸ್ಟ್ರೇಲಿಯಾ ಆಟಗಾರರು ತತ್ತರಿಸಿದರು. ವೇಗಿ ಉಮೇಶ್ ಯಾದವ್ ಟೀಂ ಇಂಡಿಯಾ ಪರ 4 ವಿಕೆಟ್ ಕಿತ್ತು ಆಸ್ಟ್ರೇಲಿಯಾಗೆ ಶಾಕ್ ನೀಡಿದರು. ಉಮೇಶ್ ಗೆ ಸಾಥ್ ನೀಡಿದ ಸ್ಪಿನ್ ಮಾಂತ್ರಿಕರಾದ ಅಶ್ವಿನ್ ಮತ್ತು ಜಡೇಜಾ ಸಹ ತಲಾ ಎರಡು ವಿಕೆಟ್ ಕಬಳಿಸಿದರು. 
ಆಸ್ಟ್ರೇಲಿಯಾ ಪರ ಮ್ಯಾಟ್ ರೆನ್ಶಾ 68, ಡೇವಿಡ್ ವಾರ್ನರ್ 38, ಸ್ಟೀವನ್ ಸ್ಮಿತ್ 27, ಪೀಟರ್ ಹ್ಯಾಂಡ್ಸ್ ಕೊಂಬ್ 22, ಮಿಚೆಲ್ ಮಾರ್ಷ್ 16, ಮಿಚೆಲ್ ಸ್ಟಾರ್ಕ್ ಅಜೇಯ 57 ಮತ್ತು ಜೋಸ್ ಹ್ಯಾಸಲ್ವುಡ್ 1 ರನ್ ಗಳಿಸಿ ನಾಳೆ ಎರಡನೇ ದಿನದಾಟವನ್ನು ಆರಂಭಿಸಲಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com