ಧೋನಿ ಹಾದಿಯಲ್ಲಿ ವೃದ್ಧಿಮಾನ್‌ ಸಾಹಾ: ಸೂಪರ್‌ಮ್ಯಾನ್‌ ಕ್ಯಾಚ್

ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯುತ್ತಿದ್ದು ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್‌ ಸಾಹಾ ಗಾಳಿಯಲ್ಲಿ ಹಾರಿ ಸೂಪರ್ ಮ್ಯಾನ್ ರೀತಿ ಕ್ಯಾಚ್...
ವೃದ್ಧಿಮಾನ್ ಸಾಹಾ
ವೃದ್ಧಿಮಾನ್ ಸಾಹಾ
ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯುತ್ತಿದ್ದು ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್‌ ಸಾಹಾ ಗಾಳಿಯಲ್ಲಿ ಹಾರಿ ಸೂಪರ್ ಮ್ಯಾನ್ ರೀತಿ ಕ್ಯಾಚ್ ಹಿಡಿದಿದ್ದಾರೆ. 
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದೇ ವೇಳೆ ಸ್ಟೀವ್ ಒ ಕೇಫೆ ಅವರು ಉಮೇಶ್ ಯಾದವ್ ಎಸೆತವನ್ನು ಸ್ಟ್ರೈಟ್ ಡ್ರೈವ್ ಮಾಡಿದರು ಆದರೆ ಚೆಂಡು ಬ್ಯಾಟ್ ಗೆ ತಗುಲಿ ಸ್ಲಿಪ್ ನಲ್ಲಿ ಹೋಗುತ್ತಿದ್ದ ಚೆಂಡನ್ನು ಕೀಪರ್ ವೃದ್ಧಿಮಾನ್ ಸಾಹಾ ಸೂಪರ್ ಮ್ಯಾನ್ ರೀತಿ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದರು. 
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಂತರ ಸಮರ್ಥ ಕೀಪರ್ ನಿರೀಕ್ಷೆಯಲ್ಲಿದ್ದ ತಂಡಕ್ಕೆ ವೃದ್ಧಿಮಾನ್ ಸಾಹಾ ಸಿಕ್ಕಿದ್ದಾರೆ. ಧೋನಿಯಂತೆ ಮೈದಾನದಲ್ಲಿ ಚಾಣಾಕ್ಷವಾಗಿ ವರ್ತಿಸುವ ಸಾಹಾ ಮುಂದಿನ ಟೀಂ ಇಂಡಿಯಾಗೆ ಧೋನಿಯಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com