

ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದ ಭಾವಿ ನಾಯಕ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಎಂದು ಹೇಳಿದ್ದಾರೆ.
ಕೊಹ್ಲಿಗೆ ನಾಯಕತ್ವ ವಹಿಸುವ ಕುರಿತು ಉಂಟಾಗಿದ್ದ ಸಾಕಷ್ಟು ವಿದ್ಯಮಾನಗಳು ಕೊಹ್ಲಿ ಹಾಗೂ ಧೋನಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಶಂಕೆಯನ್ನು ಮೂಡಿಸುತ್ತಿದ್ದವು. ಆದರೆ ಇಂತಹ ಆರೋಪಗಳು ಬಂದಾಗಲೆಲ್ಲಾ ಈ ಜೋಡಿ ಅದು ಸುಳ್ಳು ಎಂದು ಸಾಬೀತುಪಡಿಸಿತ್ತು. ಇದೀಗ ಮತ್ತೊಮ್ಮೆ ಈ ಜೋಡಿ ತಾವಿಬ್ಬರೂ ಉತ್ತಮ ಸ್ನೇಹಿತರು ಎಂಬುದನ್ನು ಸಾಬೀತುಪಡಿಸಿದ್ದು, ನಾಯಕತ್ವ ತ್ಯಜಿಸಿದ ಮಹೇಂದ್ರ ಸಿಂಗ್ ಧೋನಿಗೆ ಕೊಹ್ಲಿ ಟ್ವಿಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.
ನಾಯಕತ್ವ ತ್ಯಜಿಸಿದ ಧೋನಿಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಗೌರವ ಸಲ್ಲಿಕೆ ಮಾಡಿದ್ದು, ಟ್ವಿಟರ್ ನಲ್ಲಿ ಈ ಬಗ್ಗೆ ಕೊಹ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಯುವ ಕ್ರಿಕೆಟಿಗರು ಎಂತಹ ನಾಯಕ ತಮಗೆ ಬೇಕು ಎಂಬುದನ್ನು ತೋರಿಸಿಕೊಟ್ಟ ನಿಮಗೆ ನಾನು ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ. ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಆಗಿರುತ್ತೀರಿ ಭಾಯ್ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
Thanks for always being the leader a youngster wants to have around him. You'll always be my captain @msdhoni Bhai