ಲಂಡನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 322 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಮ್ಯಾಥ್ಯೂಸ್ ಪಡೆ 48.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ ಜಯಭೇರಿ ಭಾರಿಸಿದೆ. ಆ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ಪಡೆ ಜೀವಂತವಾಗಿದ್ದು, ಮುಂದಿನ ಪಂದ್ಯವನ್ನೂ ಗೆದ್ದರೆ ಲಂಕಾ ತಂಡದ ಸೆಮೀಸ್ ಹಾದಿ ಸುಗಮವಾಗಲಿದೆ. ಶ್ರೀಲಂಕಾ ಪರ ಮೆಂಡಿಸ್ (89 ರನ್) ಮತ್ತು ಗುಣತಿಲಕ (76 ರನ್) ಆಕರ್ಷಕ ಅರ್ಧ ಶತಕ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪೆರೇರಾ (47 ರನ್) (ಗಾಯಗೊಂಡು ನಿವೃತ್ತಿ) ರನ್ ಗಳಿಸಿದರು. ಇನಿಂಗ್ಸ್ ಕೊನೆಯಲ್ಲಿ ನಾಯಕ ಏಂಜಲೋ ಮ್ಯಾಥ್ಯೂಸ್ (ಅಜೇಯ 52 ರನ್) ಮತ್ತು ಗುಣರತ್ನೆ (ಅಜೇಯ 34 ರನ್) ಶ್ರೀಲಂಕಾಗೆ ಜಯ ತಂದಿತ್ತರು.