ಧವನ್-ಶರ್ಮಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತ್ಯಂತ ಯಶಸ್ವೀ ಆರಂಭಿಕ ಜೋಡಿ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತೀಯರ ಅಧಿಪತ್ಯ ಮುಂದುವರೆದಿದ್ದು, ತಂಡದ ಯಶಸ್ವೀ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಇದೀಗ ಚಾಂಪಿಯನ್ಸ್ ಟ್ರೋಫಿಯ ಅತ್ಯಂತ ಯಶಸ್ವೀ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.
ಧವನ್-ಶರ್ಮಾ ಜೋಡಿ (ಸಂಗ್ರಹ ಚಿತ್ರ)
ಧವನ್-ಶರ್ಮಾ ಜೋಡಿ (ಸಂಗ್ರಹ ಚಿತ್ರ)
Updated on: 

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತೀಯರ ಅಧಿಪತ್ಯ ಮುಂದುವರೆದಿದ್ದು, ತಂಡದ ಯಶಸ್ವೀ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಇದೀಗ ಚಾಂಪಿಯನ್ಸ್ ಟ್ರೋಫಿಯ ಅತ್ಯಂತ ಯಶಸ್ವೀ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.

ನಿನ್ನೆ ಬಾಂಗ್ಲೇದಶ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಈ ಜೋಡಿ 87 ರನ್ ಗಳ ಅಮೂಲ್ಯ ಜೊತೆಯಾಟವಾಡಿತ್ತು. ಈ ಜೋಡಿ ಹಾಕಿಕೊಟ್ಟ ಭದ್ರ ಬುನಾದಿಯೊಂದಿಗೆ ಭಾರತ ಭರ್ಜರಿ 9 ವಿಕೆಟ್ ಗಳ ಜಯ ದಾಖಲಿಸಿತ್ತು. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಅತ್ಯಂತ ಯಶಸ್ವೀ ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.

ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಈ ವರೆಗೂ 9 ಇನ್ನಿಂಗ್ಸ್ ಗಳನ್ನಾಡಿದ್ದು, ಈ ಪೈಕಿ 85.11 ಸರಾಸರಿಯಲ್ಲಿ ಒಟ್ಟು 766 ರನ್ ಗಳಿಸಿದೆ. ಆ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು ರನ್ ಗಳಿಕೆ ಮಾಡಿದ ಅತ್ಯಂತ ಯಶಸ್ವೀ ಜೋಡಿ ಎಂಬ ಕೀರ್ತಿಗೆ ಭಾರತೀಯ ಆರಂಭಿಕ ಜೋಡಿ ಪಾತ್ರವಾಗಿದೆ. 9 ಇನ್ನಿಂಗ್ಸ್ ಗಳಲ್ಲಿ ಧವನ್ ಹಾಗೂ ಶರ್ಮಾ ಜೋಡಿ 766 ರನ್ ಗಳನ್ನು ಕಲೆಹಾಕಿದ್ದು, ಇದರಲ್ಲಿ ನಾಲ್ಕು ಶತಕ ಹಾಗೂ 3 ಅರ್ಧಶತಕದ ಜೊತೆಯಾಟಗಳು ಸೇರಿವೆ.

ಇನ್ನು ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡ ಕ್ರಿಸ್ ಗೇಯ್ಲ್ ಹಾಗೂ ಶಿವನಾರಾಯಣ್ ಚಂದ್ರಪಾಲ್ ಜೋಡಿ ಇದ್ದು, ಇವರು 9 ಇನ್ನಿಂಗ್ಸ್ ಗಳಲ್ಲಿ ಒಟ್ಟು 635 ರನ್ ಕಲೆಹಾಕಿದ್ದಾರೆ. ಈ ಪೈಕಿ 2 ಶತಕ ಹಾಗೂ 3 ಅರ್ಧಶತಕದ ಜೊತೆಯಾಟಗಳು ಸೇರಿವೆ. ಮೂರನೇ ಸ್ಥಾನದಲ್ಲಿ ಮತ್ತೆ ಭಾರತೀಯರಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜೋಡಿ ಇದೆ. ಈ ಜೋಡಿ ಒಟ್ಟು 7 ಇನ್ನಿಂಗ್ಸ್ ಗಳಲ್ಲಿ 412 ರನ್ ಗಳಿಸಿದೆ. ಈ ಪೈಕಿ 1 ಶತಕ ಹಾಗೂ 3 ಅರ್ಧಶತಕದ ಜೊತೆಯಾಟಗಳು ಸೇರಿವೆ. ನಾಲ್ಕನೇ ಸ್ಥಾನದಲ್ಲೂ ಭಾರತೀಯ ಜೋಡಿಯೇ ಇದ್ದು, ದಿವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಜೋಡಿ ಒಟ್ಟು 5 ಇನ್ನಿಂಗ್ಸ್ ಗಳಲ್ಲಿ 374 ರನ್ ಸಿಡಿಸಿದೆ. ಈ ಪೈಕಿ 1 ಶತಕ ಹಾಗೂ 3 ಅರ್ಧಶತಕದ ಜೊತೆಯಾಟಗಳು ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com