ಪಾಕಿಸ್ತಾನ ನೀಡಿದ್ದ 339 ರನ್ ಗಳ ಗುರಿ ಬೆನ್ನು ಹತ್ತಿದ ಭಾರತಕ್ಕೆ ಪಾಕ್ ವೇಗಿ ಮಹಮದ್ ಆಮಿರ್ ಅಕ್ಷರಶಃ ದುಸ್ವಪ್ನವಾಗಿ ಕಾಡಿದರು. ಆರಂಭದಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಔಟ್ ಮಾಡಿದ ಆಮಿರ್ ಭಾರತಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ನೀಡಿದರು. ಬಳಿಕ ಯುವರಾಜ್ ಸಿಂಗ್ ಕೂಡ ಶದಾಬ್ ಖಾನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಮತ್ತೊಂದು ತುದಿಯಲ್ಲಿದ್ದ ಧೋನಿ ಹಸನ್ ಅಲಿ ಬೌಲಿಂಗ್ ನಲ್ಲಿ ಔಟ್ ಆಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತು.