ಬೆಂಗಳೂರು ಟೆಸ್ಟ್ ಗೆಲುವು: ಟೀಂ ಇಂಡಿಯಾ ಟೆಸ್ಟ್ ನಂ.1 ಸ್ಥಾನಕ್ಕೆ ಧಕ್ಕೆ ಇಲ್ಲ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲುವ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದು ಟೀಂ ಇಂಡಿಯಾ...
ಟೀಂ ಇಂಡಿಯಾ
ಟೀಂ ಇಂಡಿಯಾ
ದುಬೈ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲುವ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದು ಟೀಂ ಇಂಡಿಯಾ ಟೆಸ್ಟ್ ನಂಬರ್ 1 ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ. 
ಬೆಂಗಳೂರು ಟೆಸ್ಟ್ ಪಂದ್ಯವನ್ನು ಗೆದ್ದಿರುವ ಭಾರತದ ಅಗ್ರಪಟ್ಟಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತನ್ನ ಟ್ವೀಟ್ ನಲ್ಲಿ ತಿಳಿಸಿದೆ. 
ಏಪ್ರಿಲ್ ಒಂದಕ್ಕೆ ಅನ್ವಯವಾಗುವಂತೆ ಟೀಂ ಇಂಡಿಯಾ ನಂಬರ್ 1 ಸ್ಥಾನದಲ್ಲೇ ಮುಂದುವರಿಯಲಿದ್ದು, ವರ್ಷಾಂತ್ಯದ ಅಗ್ರಸ್ಥಾನಕ್ಕಾಗಿ ನೀಡಲಾಗುವ 7 ಕೋಟಿ ರುಪಾಯಿ ಬಹುಮಾನ ಭಾರತದ ಪಾಲಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com