ಐಪಿಎಲ್ ಉದ್ಘಾಟನೆ: ಸಚಿನ್, ದ್ರಾವಿಡ್, ಗಂಗೂಲಿ, ವೀರೂ, ಲಕ್ಷ್ಮಣ್ ಗೆ ಬಿಸಿಸಿಐ ಸನ್ಮಾನ

ಬಹು ನಿರೀಕ್ಷಿತ ಐಪಿಎಲ್ ಸೀಸನ್ 10ಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ಕ್ರಿಕೆಟ್ ತಂಡ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗಂಗೂಲಿ ಸೇರಿದಂತೆ ಐದು ಮಂದಿ ಹಿರಿಯ ಕ್ರಿಕೆಟಿಗರನ್ನು ಸನ್ಮಾನಿಸಲು ಬಿಸಿಸಿಐ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಬಹು ನಿರೀಕ್ಷಿತ ಐಪಿಎಲ್ ಸೀಸನ್ 10ಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ಕ್ರಿಕೆಟ್ ತಂಡ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗಂಗೂಲಿ ಸೇರಿದಂತೆ ಐದು ಮಂದಿ ಹಿರಿಯ  ಕ್ರಿಕೆಟಿಗರನ್ನು ಸನ್ಮಾನಿಸಲು ಬಿಸಿಸಿಐ ನಿರ್ಧರಿಸಿದೆ.

ಇದೇ ಏಪ್ರಿಲ್ 5ರಂದು ಹೈದರಾಬಾದ್ ನಲ್ಲಿ ಐಪಿಎಲ್ 10 ಉದ್ಘಾಟನಾ ಸಮಾಂರಭ ನಡೆಯಲಿದ್ದು, ಈ ವಿದ್ಯುಕ್ತ ಸಮಾರಂಭದ ನಡುವೆಯೇ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್  ಹಾಗೂ ವೀರೇಂದ್ರ ಸೆಹ್ವಾಗ್ ಅವರನ್ನು ಸನ್ಮಾನಿಸಲು ಬಿಸಿಸಿಐ ನಿರ್ಧರಿಸಿದೆ. 90ರ ದಶಕದಲ್ಲಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಈ ಐದು ಮಂದಿ ಆಟಗಾರರನ್ನು ಸನ್ಮಾನಿಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು  ತಿಳಿಸಿವೆ.

ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಅಂತೆಯೇ ಮಾಜಿ ಮಹಿಳಾ ಕ್ರಿಕೆಟಿಗರನ್ನೂ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ  ಗೌರವ ಧನದ ಚೆಕ್ ಗಳನ್ನು ವಿತರಿಸಲು ಬಿಸಿಸಿಐ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com