ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಮ್ ನ ಒಂದು ಪೋಸ್ಟ್ ನಿಂದ ಎಷ್ಟು ಸಂಪಾದಿಸುತ್ತಾರೆ ಗೊತ್ತಾ?

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಜನಪ್ರಿಯತೆ ಎಲ್ಲರಿಗೂ ತಿಳಿದ ವಿಚಾರವೇ.. ಆದರೆ ಅವರ ಇಂದಿನ ಜನಪ್ರಿಯತೆಯೇ ಅೃವರು ಕೋಟಿ ಕೋಟಿ ಹಣ ಸಂಪಾದನೆ ಮಾಡುವಂತೆ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಜನಪ್ರಿಯತೆ ಎಲ್ಲರಿಗೂ ತಿಳಿದ ವಿಚಾರವೇ.. ಆದರೆ ಅವರ ಇಂದಿನ ಜನಪ್ರಿಯತೆಯೇ ಅೃವರು ಕೋಟಿ ಕೋಟಿ ಹಣ ಸಂಪಾದನೆ ಮಾಡುವಂತೆ ಆಗಿದೆ.
ಹೌದು..ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಮತ್ತು ಜಾಹಿರಾತುಗಳನ್ನು ಹೊರತು ಪಡಿಸಿಯೂ ಬೇರೆ ಬೇರೆ ಮೂಲಗಳಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಅವುಗಳಲ್ಲಿ ಒಂದು ಎಂಬಂತೆ ಅವರು ಸಾಮಾಜಿಕ  ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಒಂದೇ ಒಂದು ಪೋಸ್ಟ್ ಕೂಡ ಕೋಟಿ ಕೋಟಿ ಹಣ ಗಳಿಕೆ ಮಾಡುತ್ತಿದೆ. ಸಮಾಜಿಕ ಜಾಲತಾಣಗಳಲ್ಲಿರುವ ಅವರ ಅಭಿಮಾನಿಗಳಿಂದಾಗಿ ಕೊಹ್ಲಿ ಅವರ ಪೋಸ್ಟ್ ಗಳು ಕೋಟ್ಯಂತರ  ಮಂದಿಯನ್ನು ತಲುಪಿತ್ತಿದೆ. ಇದೇ ಕಾರಣಕ್ಕೆ ಅವರ ಪೋಸ್ಟ್ ಗಳು ಕೂಡ ಕೋಟಿ ಕೋಟಿ ಹಣ ಬಾಚುತ್ತಿವೆ.
ಇನ್ನು ಅವರ ಇನ್ ಸ್ಟಾ ಗ್ರಾಮ್ ನಲ್ಲಿ ಹಾಕುವ ಪೋಸ್ಟ್ ಗಳಿಂದ ಎಷ್ಟು ಗಳಿಸುತ್ತಾರೆ ಗೊತ್ತಾ..? ಬರೊಬ್ಬರಿ 3.2 ಕೋಟಿ..ಹೌದು ಕ್ರಿಕೆಟ್ ಗಿಂತಲೂ ಕೊಹ್ಲಿ ಇನ್ ಸ್ಟಾ ಗ್ರಾಂ ಪೋಸ್ಟ್ ನಿಂದಲೇ ಹೆಚ್ಚು ಗಳಿಸುತ್ತಾರಂತೆ. ಈ ಬಗ್ಗೆ ಕ್ರೀಡಾ  ವೆಬ್ ಸೈಟ್ ವೊಂದು ವರದಿ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಬರೊಬ್ಬರಿ 3.2 ಕೋಟಿ ಹಣ ಗಳಿಕೆ ಮಾಡುತ್ತದೆಯಂತೆ. ಅವರ ಪೋಸ್ಟ್ ಇಷ್ಟು ಗಳಿಕೆ ಮಾಡಲು  ಅವರಿಗಿರವು ಅಭಿಮಾನಿಗಳೇ ಕಾರಣವಂತೆ.
ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ನಲ್ಲಿ ಬರೊಬ್ಬರಿ 15 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು, ಟ್ವಿಟರ್ ನಲ್ಲಿ 20 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 36 ಮಿಲಿಯನ್ ಫಾಲೋವರ್ ಗಳಿದ್ದಾರೆ.
ಕೊಹ್ಲಿಯ ಈ ಅಭೂತಪೂರ್ವ ಅಭಿಮಾನಿಗಳ ಫಾಲೋಯಿಂಗ್ ನಿಂದಾಗಿಯೇ ಅವರು ಜಾಹಿರಾತು ಸಂಸ್ಥೆಗಳ ಕಣ್ಣುಕುಕ್ಕುತ್ತಿದ್ದು, ಇದೇ ಕಾರಣಕ್ಕೆ ಅವರಿಗೆ ಕೋಟಿ ಕೋಟಿ ಹಣ ನೀಡಿ ಜಾಹಿರಾತು ಸಂಸ್ಥೆಗಳು ಜಾಹಿರಾತುಗಳಲ್ಲಿ  ಬಳಸಿಕೊಳ್ಳುತ್ತಿವೆ.
ಪ್ರಮುಖವಾಗಿ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬಳಿಕ ಕೊಹ್ಲಿ ಫಾಲೋವರ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರೊಂದಿಗೆ ಸತತ ಸರಣಿ ಜಯಗಳೂ ಕೂಡ ಅವರ ಫಾಲೋಯಿಂಗ್ ಹೆಚ್ಚಾಗಲು  ಕಾರಣವಿರಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com