ಕ್ರಿಕೆಟ್

ಸಚಿನ್ ಜೆರ್ಸಿ ಯಾರೂ ಧರಿಸುವಂತಿಲ್ಲ: ಬಿಸಿಸಿಐ ಅಘೋಷಿತ ನಿರ್ಧಾರ!

ಸಚಿನ್ ಜೆರ್ಸಿ ಯಾರೂ ಧರಿಸುವಂತಿಲ್ಲ: ಬಿಸಿಸಿಐ ಅಘೋಷಿತ ನಿರ್ಧಾರ!
ಸಂಗ್ರಹ ಚಿತ್ರ
Published On :
ಮುಂಬೈ: ಕ್ರಿಕೆಟ್ ನ ದಂತಕಥೆ ಮತ್ತು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ನಂಬರ್ 10 ಜೆರ್ಸಿಯನ್ನು ಯಾವುದೇ ಆಟಗಾರನೂ ಕೂಡ ಧರಿಸದಂತೆ ಬಿಸಿಸಿಐ ಅಘೋಷಿತ ನಿರ್ಧಾರ ಹೊರಡಿಸಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಹೌದು..ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಧರಿಸುತ್ತಿದ್ದ ನಂಬರ್ 10 ಜೆರ್ಸಿಯನ್ನು ಇನ್ನು ಮುಂದೆ ಯಾವುದೇ ಆಟಗಾರನೂ ಧರಿಸುವಂತಿಲ್ಲ ಎಂಬ ಅಲಿಖಿತ ಮತ್ತು ಅಘೋಷಿತ ಘೋಷಣೆಯೊಂದನ್ನು  ಬಿಸಿಸಿಐ ಹೊರಡಿಸಿದೆ. ಅದರಂತೆ ಇನ್ನು ಮುಂದೆ ಯಾವುದೇ ಆಟಗಾರನೂ ಕೂಡ ನಂಬರ್ 10 ಜೆರ್ಸಿಯನ್ನು ತೊಡುವಂತಿಲ್ಲ..ಸಚಿನ್ ತೆಂಡೂಲ್ಕರ್ ಮೇಲಿನ ಗೌರವದ ಕಾರಣಕ್ಕಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು  ಹೇಳಲಾಗಿದೆ.
ಅಲ್ಲದೆ ಈ ಹಿಂದೆ ಇದೇ ನಂಬರ್ 10 ಜೆರ್ಸಿ ತೊಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಅಲ್ಲದೆ ಸಚಿನ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು.  ಸಾಮಾಜಿಕ ಜಾಲತಾಣಗಳಲ್ಲಿ ಶಾರ್ದೂಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಬಳಿಕೆ ಎಚ್ಚೆತ್ತಿದ್ದ ಬಿಸಿಸಿಐ ನಂಬರ್ 10 ಜೆರ್ಸಿಯನ್ನು ಈವರೆಗೂ ಯಾವುದೇ ಆಟಗಾರರಿಗೂ ನೀಡಿಲ್ಲ. ಅಲ್ಲದೆ ಇನ್ನುಮುಂದೆಯೂ  ನೀಡದಂತೆ ಎಚ್ಚರಿಕೆ ವಹಿಸಿದೆ ಎನ್ನಲಾಗಿದೆ. ಆ ಮೂಲಕ ಸಚಿನ್ ನಿವೃತ್ತಿ ಬಳಿಕ ಬಿಸಿಸಿಐ ಅವರ ಜೆರ್ಸಿಗೂ ಅನಧಿಕೃತ ನಿವೃತ್ತಿ ಘೋಷಿಸಿದೆ.
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಇಡೀ ಕ್ರಿಕೆಟ್ ವೃತ್ತಿ ಜೀವನದಲ್ಲಿ ನಂಬರ್ 10 ಜೆರ್ಸಿಯನ್ನು ತೊಟ್ಟು ಆಡಿದ್ದರು. ಇದೇ ಕಾರಣಕ್ಕಾಗಿ ಈ ಜೆರ್ಸಿ ಸಚಿನ್ ಮಾತ್ರವಲ್ಲದೇ ಅವರ ಅಭಿಮಾನಿಗಳಲ್ಲೂ  ಭಾವನಾತ್ಮಕ ಸಂಬಂಧ ಬೆಸೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.