ಇಂತಹುದೊಂದು ಚರ್ಚೆಗೆ ಕಾರಣವಾಗಿದ್ದು, ಬಿಸಿಸಿಐ ಟ್ವೀಟ್ ಮಾಡಿರುವ ಒಂದು ವಿಡಿಯೋ..ಭಾರತದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2 ಪಂದ್ಯಗಳನ್ನು ಜಯಿಸಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದು ಸ್ಪಿನ್ನರ್ ಗಳೇ... ಪ್ರಸ್ತುತ ತಂಡದಲ್ಲಿ ಹ್ಯಾಟ್ರಿಕ್ ಹೀರೋ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್ ಸ್ಪಿನ್ ಬೌಲಿಂಗ್ ನಲ್ಲಿ ತಮ್ಮ ಪ್ರದರ್ಶನ ತೋರಿದ್ದಾರೆ.