ರಿಷಬ್ ಪಂತ್ ನಿಂದಿಸಿದ್ದ ಬ್ರಾಡ್ ಗೆ ಮೈದಾನದಲ್ಲೇ ತಿರುಗೇಟು ನೀಡಿದ್ದ ಕೊಹ್ಲಿ: ವಿಡಿಯೋ ವೈರಲ್

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತ ರಿಷಬ್ ಪಂತ್ ರನ್ನು ಕೆಣಕಿದ್ದ ಸ್ಟುವರ್ಟ್ ಬ್ರಾಡ್ ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತ ರಿಷಬ್ ಪಂತ್ ರನ್ನು ಕೆಣಕಿದ್ದ ಸ್ಟುವರ್ಟ್ ಬ್ರಾಡ್ ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.
ನಾಟಿಂಗ್ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‍ರನ್ನು ನಿಂದಿಸಿದ್ದ ಸ್ಟುವರ್ಟ್ ಬ್ರಾಡ್‍ಗೆ ಕೊಹ್ಲಿ ಆನ್ ಫೀಲ್ಡ್ ನಲ್ಲೇ ತಿರುಗೇಟು ನೀಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಪಂತ್ ಪಾದಾರ್ಪಣೆ ಮಾಡಿದ್ದು, ಮೊದಲ ಇನ್ನಿಂಗ್ಸ್ ನ 92 ನೇ ಓವರ್ ನಲ್ಲಿ 26 ರನ್ ಗಳಿಸಿದ್ದ ಪಂತ್ ಔಟಾಗಿದ್ದರು. ಈ ವೇಳೆ ಪೆವಿಲಿಯನ್ ನತ್ತ ನಡೆದಿದ್ದ ಪಂತ್ ಬಳಿ ಬಂದ ಸ್ಟುವರ್ಟ್ ಬ್ರಾಡ್ ನಿಂದಿಸಿದ್ದರು. ಈ ದೃಶ್ಯಗಳು ವಿಡಿಯೋದಲ್ಲಿ ಕೂಡ ಸೆರೆಯಾಗಿತ್ತು. ಸದ್ಯ ಪಂತ್ ರನ್ನು ನಿಂದಿಸಿದ್ದ ಬ್ರಾಡ್‍ಗೆ ಅದೇ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡಿದ್ದು, ಕೊಹ್ಲಿ ಮಾತಿಗೆ ಬ್ರಾಡ್ ಉತ್ತರ ನೀಡಲಾಗದೇ ತಬ್ಬಿಬ್ಬಾಗಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.
ಇನ್ನು ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ವಿರುದ್ಧ ಕ್ರಮಕೈಗೊಂಡಿದ್ದ ಐಸಿಸಿ, ನಿಯಮ 2.2.7 ರ ಉಲ್ಲಂಘನೆ ಎಂದು ತೀರ್ಮಾನಿಸಿ ಪಂದ್ಯದ ಸಂಭಾವನೆಯ ಶೇ.15ರಷ್ಚು ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಬ್ರಾಡ್ ವರ್ತನೆ ವಿರುದ್ಧ ಗರಂ ಆಗಿದ್ದ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಕೂಡ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಘಟನೆಯನ್ನು ನೆನಪು ಮಾಡಿ ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದಿದ್ದರು. ಅಂದು ಕ್ರೀಸ್ ನಲ್ಲಿದ್ದ ಯುವರಾಜ್ ಸಿಂಗ್ ರನ್ನು ಫ್ಲಿಂಟಾಫ್ ಕೆಣಕಿದ್ದರು. ಆದರೆ ಅದು ಯುವಿ ಕೋಪಕ್ಕೆ ಇದೇ ಸ್ಟುವರ್ಟ್ ಬ್ರಾಡ್ ಬಲಿಯಾಗಿ ಆರು ಎಸೆತದಲ್ಲಿ ಆರು ಸಿಕ್ಸರ್ ಚಚ್ಚಿಸಿಕೊಂಡಿದ್ದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಟ್ವೀಟಿಗರು ಬ್ರಾಡ್ ಕಾಲೆಳೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com