4ನೇ ಟೆಸ್ಟ್ ಪಂದ್ಯ: ಮೊದಲ ದಿನದಾಟ ಮುಕ್ತಾಯ, ವಿಕೆಟ್ ನಷ್ಟವಿಲ್ಲದೇ ಭಾರತ 19 ರನ್

ತೀವ್ರ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಆಂಗ್ಲರ ವಿರುದ್ಧ ಮೇಲುಗೈ ಸಾಧಿಸಿರುವ ಭಾರತ ಮೊದಲ ದಿನದಾಟದ ಗೌರವ ತನ್ನದಾಗಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸೌಥ್ಯಾಂಪ್ಟನ್: ತೀವ್ರ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಆಂಗ್ಲರ ವಿರುದ್ಧ ಮೇಲುಗೈ ಸಾಧಿಸಿರುವ ಭಾರತ ಮೊದಲ ದಿನದಾಟದ ಗೌರವ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡದ ಮೇಲೆ ಸವಾರಿ ಮಾಡಿದ ಭಾರತೀಯ ಬೌಲರ್ ಗಳು ಅಂಗ್ಲರನ್ನು ಕೇವಲ 246 ರನ್ ಗಳಿಗೆ ಕಟ್ಟಿಹಾಕಿದರು. ಇಂಗ್ಲೆಂಡ್ ಪರ ಮೊಯಿನ್ ಅಲಿ (40 ರನ್) ಮತ್ತು ಸ್ಯಾಮ್ ಕರ್ರನ್ (78 ರನ್) ಮಾತ್ರ ಪ್ರತಿರೋಧದ ಹೋರಾಟ ಪ್ರದರ್ಶನ ಮಾಡಿದರು. ಉಳಿದೆಲ್ಲಾ ಆಟಗಾರರೂ ಕ್ರೀಸ್ ಗೆ ಬಂದಷ್ಚೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ ತಂಡ 246 ರನ್ ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ನೀಡಿದ 246 ರನ್ ಗಳನ್ನು ಬೆನ್ನು ಹತ್ತಿರುವ ಭಾರತ ದಿನದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟ ವಿಲ್ಲದೇ 19ರನ್ ಕಲೆ ಹಾಕಿದೆ. 3 ರನ್ ಗಳಿಸಿರುವ ಶಿಖರ್ ಧವನ್ ಮತ್ತು 11 ರನ್ ಗಳಿಸಿರುವ ಕೆಎಲ್ ರಾಹುಲ್ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com