ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಬೌಲಿಂಗ್ ವಿಭಾಗ ಮತ್ತು ಚೇತೇಶ್ವರ ಪೂಜಾರ ಅವರಿಗೆ ಗೆಲುವಿನ ಕ್ರೆಡಿಟ್ ನೀಡಿದರು. ಈ ವೇಳೆ ಪೂಜಾರ ಅವರ ಅಮೋಘ ಬ್ಯಾಟಿಂಗ್ ನ ಗುಣಗಾನ ಮಾಡಿದ ಕೊಹ್ಲಿ, ಪೂಜಾರ ಅವರ ಇನ್ನಿಂಗ್ಸ್ ಬೆಲೆ ಕಟ್ಟಲಾಗದ್ದು. ಅವರ ಶತಕದ ನೆರವಿನಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಗೌರವಾನ್ವಿತ ಮೊತ್ತ ಪೇರಿಸುವಂತಾಯಿತು. ಅಂತೆಯೇ ಬೌಲರ್ ಗಳ ಸಾಂಘಿಕ ಪ್ರದರ್ಶನದಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ 15 ರನ್ ಗಳ ಮುನ್ನಡೆ ದೊರೆಯಿತು.