2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 283 ರನ್ ಗಳಿಗೆ ಆಲೌಟ್, ಆಸ್ಟ್ರೇಲಿಯಾಗೆ 43 ರನ್ ಮುನ್ನಡೆ

ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 283 ರನ್ ಗಳಿಗೆ ಆಲೌಟ್ ಆಗಿದ್ದು, ಆಸ್ಚ್ರೇಲಿಯಾ ತಂಡ 43 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ವಿಕೆಟ್ ಪಡೆದ ಖುಷಿಯಲ್ಲಿ ಆಸಿಸ್ ಬಳಗ
ವಿಕೆಟ್ ಪಡೆದ ಖುಷಿಯಲ್ಲಿ ಆಸಿಸ್ ಬಳಗ
Updated on: 
ಪರ್ತ್: ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 283 ರನ್ ಗಳಿಗೆ ಆಲೌಟ್ ಆಗಿದ್ದು, ಆಸ್ಚ್ರೇಲಿಯಾ ತಂಡ 43 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
3ನೇ ದಿನದಾಟ ಆರಂಭಿಸಿದ್ದ ಅಜಿಂಕ್ಯ ರಹಾನೆ ಮತ್ತು ನಾಯಕ ವಿರಾಟ್ ಕೊಹ್ಲಿ ಭಾರತದ ಇನ್ನಿಂಗ್ಸ್ ಜೀವ ತುಂಬಿದರು. ಆದರೆ ಅರ್ಧಶತಕ ಸಿಡಿಸಿದ ರಹಾನೆ 51 ರನ್ ಗಳಿಸಿ ಔಟ್ ಆದರು. ಆ ಬಳಿಕ ನಾಯಕ ಕೊಹ್ಲಿ ದಾಖಲೆಯ ಶತಕ ಸಿಡಿಸಿದರಾದರೂ, ಕೊಹ್ಲಿ 123 ರನ್ ಗಳಿ ಕಮಿನ್ಸ್ ಬೌಲಿಂಗ್ ನಲ್ಲಿ ಔಟ್ ಆದರು. ಆದರೆ ಕೊಹ್ಲಿ ವಿಕೆಟ್ ಪತನದ ಬಳಿಕ ಕ್ರೀಸ್ ಗೆ ಆಗಮಿಸಿದ ಯಾವ ಆಟಗಾರನೂ ಗಟ್ಟಿಯಾಗಿ ಕ್ರೀಸ್ ನಲ್ಲಿ ನೆಲೆಯೂರುವ ಪ್ರಯತ್ನ ಮಾಡಲಿಲ್ಲ.
ರಿಷಬ್ ಪಂತ್ 36 ರನ್ ಗಳಿಸಿ ಭಾರತದ ಬ್ಯಾಟಿಂಗ್ ಗೆ ಜೀವ ತುಂಬುವ ಪ್ರಯತ್ನ ಮಾಡಿದರಾದರೂ, ಪಂತ್ 3 ರನ್ ಗಳಿಸಿ ಲಿಯಾನ್ ಗೆ ವಿಕೆಟ್ ಒಪ್ಪಿಸಿದರು. ಹನುಮ ವಿಹಾರಿ ಕೂಡ 20 ರನ್ ಗಳಿಸಿ ಔಟಾದರೆ, ಶಮಿ ಶೂನ್ಯ ಸುತ್ತಿದರು. ಇಶಾಂತ್ ಶರ್ಮಾ (01), ಜಸ್ ಪ್ರೀತ್ ಬುಮ್ರಾ (4 ರನ್) ಒಂದಂಕಿ ರನ್ ಗಳಿಸಿ ಪೆಲಿಯನ್ ಸೇರಿಕೊಂಡರು. ಅಂತಿಮವಾಗಿ ಭಾರತ ತಂಡ 283 ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಆಸ್ಟ್ರೇಲಿಯಾ ತಂಡ 43 ರನ್ ಗಳಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಆಸ್ಟ್ರೇಲಿಯಾ ಪರ ನಥನ್ ಲಿಯಾನ್ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಉಳಿದಂತೆ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೆಜಲ್ ವುಜ್ ತಲಾ 2 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com