ಕಳಪೆ ಫಾರ್ಮ್ ನಲ್ಲಿರುವ ರಾಹುಲ್, ವಿಜಯ್ ಕಿತ್ತು ಹಾಕಿ ಶುಭ್ ಮನ್ ಗಿಲ್ ಗೆ ಅವಕಾಶ ನೀಡಿ: ಅಭಿಮಾನಿಗಳ ಆಗ್ರಹ
ಆಸ್ಟ್ಕೇಲಿಯಾ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ರನ್ನು ಕಿತ್ತುಹಾಕಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.
ನವದೆಹಲಿ: ಆಸ್ಟ್ಕೇಲಿಯಾ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ರನ್ನು ಕಿತ್ತುಹಾಕಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.
ಇಂತಹುದೊಂದು ಒತ್ತಡಕ್ಕೆ ಕಾರಣವಾಗಿದ್ದು ರಣಜಿ ಕ್ರಿಕೆಟ್ ನಲ್ಲಿ ಗಿಲ್ ತೋರುತ್ತಿರುವ ಅದ್ಬುತ ಪ್ರದರ್ಶನ. ಹೌದು ತಮಿಳುನಾಡು ವಿರುದ್ದದ ಪಂದ್ಯದಲ್ಲಿ ಪಂಜಾಬ್ ಪರ ಆಡುತ್ತಿರುವ ಶುಭ್ ಮನ್ ಗಿಲ್ 199 ರನ್ ಗಳ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ 215 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಇದಕ್ಕೆ ಉತ್ತರವಾಗಿ ಆಡಿದ ಪಂಜಾಬ್ ತಂಡ 2ನೇ ದಿನದಾಟ ಮುಕ್ತಾಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 308 ರನ್ ಪೇರಿಸಿದೆ. ಈ ಮೊತ್ತದಲ್ಲಿ ಶುಭ್ ಮನ್ ಗಿಲ್ ಅವರೇ 199ರನ್ ಪೇರಿಸುವ ಮೂಲಕ ಟೀಂ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ.
ಇನ್ನು ಆಸ್ಚ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಓಪನರ್ ಗಳಾದ ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ವೈಫಲ್ಯ ಮುಂದುವರೆದಿರುವಂತೆಯೇ ಇತ್ತ ರಣಜಿಯಲ್ಲಿ ಉದಯೋನ್ಮುಖ ಆಟಗಾರರಾದ ಮಾಯಂಕ್ ಅಗರ್ವಾಲ್, ಶುಭ್ ಮನ್ ಗಿಲ್ ರಂತಹ ಆಟಗಾರರು ಮಿಂಚುತ್ತಿರುವುದು ರಾಷ್ಟ್ರೀಯ ತಂಡದ ಆಟಗಾರರ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ.
Shubman Gill meanwhile 157 (181) not out against TN. Should ideally be our next no.3 or even can take the other opening position, if Rahul continues fails to nail down that position.
If prithvi, rohit are unfit. Murali, KL rahul & Dhawan are not in good form. Then why doesn't indian selectors give a chance to Shubman Gill.. Boy won player of the series in U19WC. In ongoing Ranji test he is unbeaten at 199. @BCCI@sachin_rt@imVkohli#INDvAUS
@BCCI Its better to take a call on Vijay and Rahul after this match as they both are not good professional cricketers neither they score runs nor they stay on pitch till 20 to 25 overs It better to give chance to somewhat allrounders overseas in opening position or Shubhman gill
@imVkohli Hi Virat, I think we have given enough chances to Rahul and Vijay. They disappointed in England and again in the three innings. Don’t you think that the young’s like Manoj Kabra and Subhman Gill must take the bigger stage like Prithvi Shaw!!!!! A die hard cricket fan!!!
I feel India should try young guns shubhman gill and parthiv shaw as test openers #AUSvIND Vijay has past his prime and Shikhar looks too lose and KL should never be an opener...
I Can See Shubman Gill & Prthivi Shaw Opening Together In Test Cricket For India Very Soon.. And That Will A Sight To Behold..Take All My Money & Grant My Wish.. ❤️