ಪೋರ್ಟ್ ಎಲಿಜಬೆತ್: ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 274 ರನ್ ಪೇರಿಸಿದೆ.
ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್ ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರೊಂದಿಗೆ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ 274 ರನ್ ಗಳನ್ನು ಪೇರಿಸಿದ್ದು ಆಫ್ರಿಕಾಗೆ ಗೆಲ್ಲಲು 275 ರನ್ ಗುರಿ ನೀಡಿದೆ.
ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಸ್ಪರ್ಧಾತ್ಮಕ ರನ್ ಪೇರಿಸಲು ನೆರವಾದರು. ಭಾರತ ಪರ ಶಿಖರ್ ಧವನ್ 34, ವಿರಾಟ್ ಕೊಹ್ಲಿ 36, ಶ್ರೇಯರ್ ಅಯ್ಯರ್ 30, ಭುವನೇಶ್ವರ್ ಕುಮಾರ್ 19 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ನೆಗಿಡಿ 4 ವಿಕೆಟ್ ಪಡೆದಿದ್ದಾರೆ.
6 ಪಂದ್ಯಗಳ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 3-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದರೆ ಸರಣಿ ಭಾರತದ ಕೈವಶವಾಗಲಿದೆ.