3ನೇ ಟೆಸ್ಟ್: ಐದು ವಿಕೆಟ್ ಪಡೆದ ಬೂಮ್ರಾ, ದಕ್ಷಿಣ ಆಫ್ರಿಕಾ 194ಕ್ಕೆ ಆಲೌಟ್

ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ 194 ರನ್ ಗಳಿ ಸರ್ವಪತನ ಕಂಡಿದೆ....
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು
ಜೋಹಾನ್ಸ್ ಬರ್ಗ್: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ 194 ರನ್ ಗಳಿ ಸರ್ವಪತನ ಕಂಡಿದೆ. ಆದರೂ ಏಳು ರನ್ ಗಳ ಮುನ್ನಡೆ ಸಾಧಿಸಿದೆ.
ಜೋಹಾನ್ಸ್ ಬರ್ಗ್ ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಹಾಗೂ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 194ಕ್ಕೆ ಆಲೌಟ್ ಆಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 187 ರನ್ ಗಳಿಸಿದ್ದು, ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 194ರನ್ ಗಳಿಸಿದೆ.
ಭಾರತದ ಪರ ಬಲಗೈ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಐದು ವಿಕೆಟುಗಳನ್ನು ಪಡೆಯುವ ಮೂಲಕ ಗಮನ ಸೆಳೆದರು. ಭುವನೇಶ್ವರ್ ಕುಮಾರ್ ಮೂರು, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಪರ ಅನುಭವಿ ಆಟಗಾರ ಹಾಶಿಮ್ ಆಮ್ಲಾ 61, ವೆರ್ನಾನ್ ಪಿಲಾಂಡರ್ 35, ಎಬಿಡಿ ವಿಲಿಯರ್ಸ್ 5,  ಫಾಫ್ ಡು ಪ್ಲೆಸಿಸ್ 8 ರನ್ ಗಳಿಸಿದರು.
ಮೂರು  ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ 2 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ  ಸರಣಿ ಕೈ ಚೆಲ್ಲಿದ್ದು, ಈ ಪಂದ್ಯವನ್ನು ಶತಾಯಗತಾಯ ಗೆಲ್ಲುವ ಮೂಲಕ ಮಾನ ಉಳಿಸಿಕೊಳ್ಳಲು ಹವಣಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com