ರಣಜಿಯಲ್ಲಿ ಸಚಿನ್‌ರನ್ನು ಚೊಚ್ಚಲ ಡಕ್‌ಔಟ್‌ ಮಾಡಿದ ಧೀರ, ಇಂದು ಟೀಂ ಇಂಡಿಯಾದ ಖ್ಯಾತ ಬೌಲರ್!

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯಬೇಕೆಂಬ ಕನಸು ಪ್ರತಿಯೊಬ್ಬ ಬೌಲರ್ ಗೂ ಇದ್ದೆ ಇರುತ್ತದೆ...
ಸಚಿನ್ ತೆಂಡೂಲ್ಕರ್-
ಸಚಿನ್ ತೆಂಡೂಲ್ಕರ್-
Updated on: 
ನವದೆಹಲಿ: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯಬೇಕೆಂಬ ಕನಸು ಪ್ರತಿಯೊಬ್ಬ ಬೌಲರ್ ಗೂ ಇದ್ದೆ ಇರುತ್ತದೆ. 
ಅಂತಹದರಲ್ಲಿ ರಣಜಿಯಲ್ಲಿ ಸಾಕಷ್ಟು ದಾಖಲೆ ಬರೆದಿರುವ ಸಚಿನ್ ತೆಂಡೂಲ್ಕರ್ ಅವರು ಒಂದೇ ಒಂದು ಬಾರಿ ಡಕ್‌ಔಟ್‌ ಆಗಿದ್ದರು. ಇನ್ನು ವಿಕೆಟ್ ಪಡೆದಿದ್ದು ಇಂದು ಟೀಂ ಇಂಡಿಯಾದಲ್ಲಿ ಖ್ಯಾತ ಬೌಲರ್ ಎನಿಸಿಕೊಂಡಿರುವ ಭುವನೇಶ್ವರ್ ಕುಮಾರ್. 
ಹೌದು, ಈ ಕುರಿತಂತೆ ಭುವನೇಶ್ವರ್ ಕುಮಾರ್ ಅವರೇ ಗೌರವ್ ಕಪೂರ್ ನಡೆಸಿಕೊಡುವ ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. 2009ರ ರಣಜಿ ಪಂದ್ಯದಲ್ಲಿ ಸಚಿನ್ ಅವರನ್ನು ಭುವನೇಶ್ವರ್ ಕುಮಾರ್ ಡಕ್‌ಔಟ್‌ ಮಾಡಿದ್ದರು. ಅಲ್ಲಿಯವರೆಗೂ ಒಂದು ದೇಶಿಯ ಪಂದ್ಯದಲ್ಲೂ ಸಚಿನ್ ಡಕ್‌ಔಟ್‌ ಆಗಿರಲಿಲ್ಲ. 
ನಂತರ 2012ರಲ್ಲಿ ನಾನು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೆ. ಮನಸ್ಸು ಸಚಿನ್ ಅವರನ್ನು ಮಾತನಾಡಿಸಬೇಕೆಂದು ಹಾತೊರೆಯುತ್ತಿತ್ತು. ಅದೃಷ್ಟವೆಂದರೆ ಅಂದೊಂದು ದಿನ ಸ್ವತಃ ಸಚಿನ್ ಅವರೇ ನನ್ನನ್ನು ಲಿಫ್ಟ್ ನಲ್ಲಿ ಮಾತನಾಡಿದ, ಪಂದ್ಯಕ್ಕೂ ಮುನ್ನ ಆಲ್ ದಿ ಬೆಸ್ಟ್ ಎಂದು ಹೇಳಿದ್ದರು ಎಂದು ಭುವಿ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com