ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೋಡಿ ಆಸೀಸಿಗರ ತಲೆಬಿಸಿ ಹೆಚ್ಚಾಗಿದೆ. ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಇದೇ ರೀತಿ ಆರ್ಭಟಿಸಿದರೆ ಸರಣಿ ಸೋಲು ಗ್ಯಾರಂಟಿ ಎಂದು ಭಾವಿಸಿರುವ ಆಸ್ಟ್ರೇಲಿಯಾ ನಿಷೇಧಿತ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮೊರೆ ಹೋಗಿದೆ.