ತಮ್ಮ ಅತ್ಯುತ್ತಮ ಸಾಧನೆಗಳಿಂದಾಗಿ ಅಲೈಸ್ಟರ್ ಕುಕ್ 'ಜಂಟಲ್‍ಮ್ಯಾನ್' ಕ್ರೆಡಿಟ್‌ಗೆ ಹೆಚ್ಚು ಅರ್ಹ: ಕ್ಲಾರ್ಕ್

ಇಂಗ್ಲೆಂಡ್ ಟೆಸ್ಟ್ ತಂಡದ ಆರಂಭಿಕ ಆಟಗಾರ ಅಲೈಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ..
ಅಲೈಸ್ಟರ್ ಕುಕ್
ಅಲೈಸ್ಟರ್ ಕುಕ್
ಮೆಲ್ಬೋರ್ನ್: ಇಂಗ್ಲೆಂಡ್ ಟೆಸ್ಟ್ ತಂಡದ ಆರಂಭಿಕ ಆಟಗಾರ ಅಲೈಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. 
ಈ ಮಧ್ಯೆ ಕ್ರಿಕೆಟ್ ದಿಗ್ಗಜರು ಅಲೈಸ್ಟರ್ ಕುಕ್ ಸಾಧನೆಯನ್ನು ಕೊಂಡಾಡಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೇಲ್ ಕ್ಲಾರ್ಕ್ ಅಲೈಸ್ಟರ್ ಕುಕ್ ತಮ್ಮ 12 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಅತ್ಯುತ್ತಮ ಸಾಧನೆಗಳ ಮೂಲಕ ಜಂಟಲ್‍ಮ್ಯಾನ್ ಗೇಮ್ಸ್ ನ ನಿಜವಾದ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ. 
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅಲೈಸ್ಟರ್ ಕುಕ್ ತಮ್ಮ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದರು. ಕುಕ್ ಟೆಸ್ಟ್ ಕ್ರಿಕೆಟ್ ನಲ್ಲಿ 160 ಟೆಸ್ಟ್ ಪಂದ್ಯಗಳನ್ನು ಆಡಿದ್ದು 32 ಶತಕ ಸೇರಿದಂತೆ 12,254 ರನ್ ಪೇರಿಸಿದ್ದಾರೆ. 
ಅಲೈಸ್ಟರ್ ಕುಕ್ ಓರ್ವ ಜಂಟಲ್‍ಮ್ಯಾನ್ ಹಾಗೂ ಕ್ರಿಕೆಟ್ ನ ಗ್ರೇಟ್ ಅಂಬಾಸಿಡರ್. ಕುಕ್ ಹೆಚ್ಚಾಗಿ ಮಾತನಾಡುವುದಿಲ್ಲ. ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮೈದಾನದಲ್ಲಿ ಆಡಿ ತೋರಿಸುತ್ತಿದ್ದರು ಎಂದು ಮೈಕೇಲ್ ಕ್ಲಾಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com