ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ಕಪ್ಪುಚುಕ್ಕೆ: ಸರಣಿ ಗೆಲ್ಲಲು 38 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಕಳ್ಳಾಟ, ವಿಡಿಯೋ ವೈರಲ್!

ಕ್ರಿಕೆಟ್ ಇತಿಹಾಸದಲ್ಲೇ ಕಪ್ಪುಚುಕ್ಕೆ: ಸರಣಿ ಗೆಲ್ಲಲು 38 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಕಳ್ಳಾಟ, ವಿಡಿಯೋ ವೈರಲ್!
ಸಂಗ್ರಹ ಚಿತ್ರ
Published On :
ನವದೆಹಲಿ: ಜಂಟಲ್ ಮೆನ್ ಗೇಮ್ ಕ್ರಿಕೆಟ್ ನಲ್ಲಿ 5 ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಕೆಲವೊಂದು ಸರಣಿ ಗೆಲ್ಲಲು ಎಂತ ಕಳ್ಳಾಟವಾಡುತ್ತದೆ ಎಂಬುದಕ್ಕೆ ಬೇಕಾದಷ್ಟು ಉದಾಹರಣೆ. ಆದರೆ 38 ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ಗೆಲ್ಲಲು ಅಂಡರ್ ಆರ್ಮ್ ಎಸೆದಿದ್ದರು.
38 ವರ್ಷಗಳ ಹಿಂದೆ ಮೆಲ್ಬರ್ನ್ ನಲ್ಲಿ ನಡೆದ ಬೆನ್ಸೆನ್ ಅಂಡ್ ಹೆಡ್ಜಸ್ ವರ್ಲ್ಡ್ ಸೀರಿಸ್ ಕಪ್ ನ 3ನೇ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆತಿಥೇಯ ಆಸ್ಟ್ರೇಲಿಯಾ ಕ್ರೀಡಾ ಸ್ಫೂರ್ತಿ ಮರೆತು ಆಡಿ ಗೆಲುವು ದಾಖಲಿಸಿತ್ತು. ಇದು ಕ್ರಿಕೆಟ್ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ರನ್ ಗಳಿಗೆ ಜಯ ಗಳಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತ್ತು. 236 ರನ್ ಗಳ ಗುರಿ ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ ತಂಡ 49.5 ಓವರ್ ಗಳಲ್ಲಿ 229 ರನ್ ಪೇರಿಸಿತ್ತು. ಗೆಲುವಿಗೆ 7 ರನ್ ಗಳ ಅವಶ್ಯಕತೆ ಇತ್ತು. ಆದರೆ ಕೇವಲ ಒಂದೇ ಎಸೆತ ಬಾಕಿ ಇತ್ತು. 8 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ಸಿಕ್ಸರ್ ಸಿಡಿಸಿ ಪಂದ್ಯ ಟೈ ಮಾಡೋ ಲೆಕ್ಕಾಚಾರದಲ್ಲಿತ್ತು. 
ಬೌಲಿಂಗ್ ಮಾಡುತ್ತಿದ್ದ ಟ್ರೆವರ್ ಚಾಪೆಲ್ ಬಳಿ ಬಂದ ಗ್ರೆಗ್ ಚಾಪೆಲ್ ಅಂಡರ್ ಆರ್ಮ್ ಬೌಲಿಂಗ್ ಮಾಡುವಂತೆ ಸೂಚಿಸಿದರು. ಸಹೋದರನ ಮಾತಿನಂತೆ ಟ್ರೆವರ್ ಅಂಡರ್ ಆರ್ಮ್ ಬೌಲಿಂಗ್ ಮಾಡಿದರು. ಈ ವೇಳೆ ಕ್ರೀಸ್ ನಲ್ಲಿದ್ದ ಬ್ರೈನ್ ಮೆಕ್ ನಿ ಡಿಫೆನ್ಸ್ ಮಾಡಿ ರೋಷದಿಂದ ಬ್ಯಾಟ್ ಎಸೆದರು. ಅಂಪೈರ್ ಈ ಎಸೆತವನ್ನು ಲೀಗಲ್ ಎಂದು ಘೋಷಿಸಿದರು. 
ಆಸ್ಟ್ರೇಲಿಯಾ 6 ರನ್ ಗೆಲುವು ದಾಖಲಿಸಿತು. ಆದರೆ ಕ್ರೀಡಾಸ್ಫೂರ್ತಿ ಮರೆತ ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.