ಟೆಸ್ಟ್ ಸರಣಿ ಸೋಲಿನ ಭೀತಿ ನಡುವೆಯೇ ಏಕದಿನ ಸರಣಿಗೆ ತಂಡ ಪ್ರಕಟಿಸಿದ​ ಆಸ್ಟ್ರೇಲಿಯಾ

ಹಾಲಿ ಪ್ರವಾಸಿ ಭಾರತದ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಆಸ್ಚ್ರೇಲಿಯಾ ತಂಡ ಮುಂಬರುವ ಏಕದಿನ ಸರಣಿಗೆ ತಂಡ ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮೆಲ್ಬೋರ್ನ್​: ಹಾಲಿ ಪ್ರವಾಸಿ ಭಾರತದ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಆಸ್ಚ್ರೇಲಿಯಾ ತಂಡ ಮುಂಬರುವ ಏಕದಿನ ಸರಣಿಗೆ ತಂಡ ಪ್ರಕಟಿಸಿದೆ.
ಹಾಲಿ ನಡೆಯುತ್ತಿರುವ ಟೆಸ್ಟ್ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಆಸ್ಟ್ರೇಲಿಯಾ ತಂಡ ಕೊಹ್ಲಿ ಪಡೆ ಜತೆ ಏಕದಿನ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ 14 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡವನ್ನ ಕ್ರಿಕೆಟ್​ ಆಸ್ಟ್ರೇಲಿಯಾ ಪ್ರಕಟಗೊಳಿಸಿದೆ. ನಾಯಕ ಆ್ಯರಾನ್ ಫಿಂಚ್ ನೇತೃತ್ವದ 14 ಆಟಗಾರರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ್ದು, ಏಕದಿನ ತಂಡಕ್ಕೆ ಪೀಟರ್​ ಸಿಡ್ಲ್​, ನೇಥನ್​ ಲಿಯಾನ್​ ಹಾಗೂ ಉಸ್ಮಾನ್​ ಖವಾಜಾ ವಾಪಸ್​ ಆಗಿದ್ದಾರೆ. ಅಂತೆಯೇ ಕ್ರಿಸ್​ ಲಿನ್​, ಡಿ ಆರ್ಕಿ ಶಾರ್ಟ್​, ಬೆನ್​ ಮೆಕ್ ಡ್ರಿಮೊಟ್​, ಟ್ರಾವಿಸ್​ ಹೆಡ್​ ಹಾಗೂ ಆಸ್ಟನ್​ ಅಗರ್ ಅವರನ್ನು​​ ತಂಡದಿಂದ ಕೈ ಬಿಡಲಾಗಿದೆ.  ಇನ್ನು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಕೌಂಟರ್​ ನೈಲ್ ಗೆ ವಿಶ್ರಾಂತಿ ನೀಡಲಾಗಿದೆ.
ಇದೇ ಜನವರಿ 8ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಟೀಂ ಇಂಡಿಯಾ  ಈಗಾಗಲೇ ತನ್ನ ತಂಡವನ್ನ ಪ್ರಕಟಿಸಿದೆ. ಸದ್ಯ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.
ತಂಡ ಇಂತಿದೆ:
ಆ್ಯರಾನ್​ ಫಿಂಚ್​(ಕ್ಯಾಪ್ಟನ್​) ಉಸ್ಮಾನ್​ ಖವಾಜಾ, ಶಾನ್​ ಮಾರ್ಶ್​, ಪೀಟರ್​ ಹ್ಯಾಂಡ್ಸ್ ಕಾಂಬ್​​, ಗ್ಲೆನ್​ ಮ್ಯಾಕ್ಸ್ ವೆಲ್​, ಮಾರ್ಕೊಸ್​ ಸ್ಟೋನಿಸ್​, ಮಿಚೆಲ್​ ಮಾರ್ಶ್​, ಅಲೆಕ್ಸ್​ ಕ್ಯಾರಿ, ಜೀಯೆ ರಿಚರ್ಡ್ಸನ್, ಬಿಲ್ಲಿ ಸ್ಟ್ಯಾನ್ಲೇಕ್, ಜೇಸನ್ ಬೆಹೆಂಡ್ರೊರ್ಫ್, ಪೀಟರ್ ಸಿಡಿಲ್, ನೇಥನ್​ ಲಿಯಾನ್, ಆಡಂ ಜಂಪಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com