ವೆಲ್ಲಿಂಗ್ಟನ್: 2019ರ ವಿಶ್ವಕಪ್ ಗೂ ಮುನ್ನ ನಡೆಯಲಿರುವ ಟೀಂ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಏಕದಿನ ಹಾಗೂ ಟಿ20 ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟಗೊಂಡಿದೆ.
ಜನವರಿ 23ರಿಂದ ನ್ಯೂಜಿಲ್ಯಾಂಡ್ ನಲ್ಲಿ ಏಕದಿನ ಸರಣಿ ಆರಂಭಗೊಳ್ಳಲಿದೆ. ಇನ್ನು ಲಂಕಾ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದ ಟಾಮ್ ಲಾಥನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಅವರಿಗೆ 14 ಮಂದಿ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಐದು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು ಮೊದಲ ಮೂರು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗಿದೆ. ಇನ್ನು ಗಾಯದ ಸಮಸ್ಯೆಯಿಂದ ಕಳೆದ 10 ತಿಂಗಳಿಂದ ತಂಡದಿಂದ ಹೊರಗುಳಿದಿದ್ದ ಮೈಕಲ್ ಸ್ಯಾಂಟರ್ನರ್ ಸಹ ತಂಡಕ್ಕೆ ಮರಳಿದ್ದಾರೆ.
ಇನ್ನು ಏಕದಿನ ರ್ಯಾಂಕಿಂಗ್ ನಲ್ಲಿ ನಲ್ಲಿ ಟೀಂ ಇಂಡಿಯಾ 2ನೇ ಸ್ಥಾನದಲ್ಲಿದ್ದು ನ್ಯೂಜಿಲ್ಯಾಂಡ್ 3ನೇ ಸ್ಥಾನದಲ್ಲಿದೆ.