ಇಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಕಾರಣರಾದ ಧೋನಿ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದರು. ಈ ಹಿಂದೆ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಧೋನಿ ಅವರನ್ನು ನಾಯಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡುವಂತೆ ಭಡ್ತಿ ನೀಡಿದ್ದರು. ಅದರ ಫಲವೇನೋ ಎಂಬಂತೆ ಧೋನಿ, ತಂಡದ ಬ್ಯಾಟಿಂಗ್ ಗೆ ಆಧಾರ ಸ್ಥಂಭವಾಗಿ ನಿಂತರು. ಒಟ್ಟು 114 ಎಸೆತಗಳನ್ನು ಎದುರಿಸಿದ ಧೋನಿ 6 ಬೌಂಡರಿಗಳ ಸಮೇತ ಅಜೇಯ 87 ರನ್ ಸಿಡಿಸಿದರು.