ಆಸಿಸ್ ನೆಲದಲ್ಲಿ ಈ ಸಾಧನೆ ಗೈದ 4ನೇ ಭಾರತೀಯ ಆಟಗಾರ ಧೋನಿ.. ಇಷ್ಟಕ್ಕೂ ಯಾವುದೀ ದಾಖಲೆ?

ಏಕದಿನ ಸರಣಿ ಯುದ್ದಕ್ಕೂ ಆಸ್ಟ್ರೇಲಿಯಾ ಬೌಲರ್ ಗಳ ಕಾಡಿದ ಭಾರತದ ಮಹೇಂದ್ರ ಸಿಂಗ್ ಧೋನಿ ಆಸಿಸ್ ನೆಲದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮೆಲ್ಬೋರ್ನ್: ಏಕದಿನ ಸರಣಿ ಯುದ್ದಕ್ಕೂ ಆಸ್ಟ್ರೇಲಿಯಾ ಬೌಲರ್ ಗಳ ಕಾಡಿದ ಭಾರತದ ಮಹೇಂದ್ರ ಸಿಂಗ್ ಧೋನಿ ಆಸಿಸ್ ನೆಲದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
ಹೌದು.. ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರೂ ಏಕದಿನ ಪಂದ್ಯಗಳಲ್ಲಿ ಮೂರು ಬಾರಿಯೂ 50ಕ್ಕೂ ಹೆಚ್ಚು ರನ್ ಗಳಿಸಿದ ಧೋನಿ, ಆಸಿಸ್ ನೆಲದಲ್ಲಿ 1 ಸಾವಿರ ರನ್ ಪೂರೈಕೆ ಮಾಡಿದ್ದಾರೆ. ಅಲ್ಲದೆ ಈ ಸಾಧನೆಗೈದ ಭಾರತದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಧೋನಿ ಭಾಜನರಾಗಿದ್ದಾರೆ. ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಕಾಂಗರೂಗಳ ಮಾಡಿದ ಎರಡು ಜೀವದಾನಗಳ ಸದುಪಯೋಗ ಪಡಿಸಿಕೊಂಡ ಧೋನಿ ಅಕ್ಷರಶಃ ಆಸಿಸ್ ಬೌಲರ್ ಗಳ ಬೆಂಡೆತ್ತಿದರು. ಒಟ್ಟು 114 ಎಸೆತಗಳನ್ನು ಎದುರಿಸಿದ ಧೋನಿ 6 ಬೌಂಡರಿಗಳ ಸಮೇತ ಅಜೇಯ 87 ರನ್ ಸಿಡಿಸಿದರು. ಆ ಮೂಲಕ ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತು ತಂಡದ ಗೆಲುವಿಗೆ ಕಾರಣರಾದರು.
ಆಸಿಸ್ ನೆಲದಲ್ಲಿ 1 ಸಾವಿರ ರನ್ ಪೂರೈಸಲು ಧೋನಿಗೆ ಕೇವಲ 36 ರನ್ ಗಳ ಅವಶ್ಯಕತೆ ಇತ್ತು. ಆದರೆ ಇಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಧೋನಿ ಗಳಿಸಿದ 87 ರನ್ ಗಳ ಮೂಲಕ ಅವರು ಆಸಿಸ್ ನೆಲದಲ್ಲಿ 1 ಸಾವಿರ ರನ್ ಪೂರೈಸಿದ ಭಾರತದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅಲ್ಲದೆ ಆಸಿಸ್ ನೆಲದಲ್ಲಿ ತಮ್ಮ ರನ್ ಗಳಿಕೆಯನ್ನು 1, 051ಕ್ಕೆ ಏರಿಕೆ ಮಾಡಿಕೊಂಡರು.
ಇದಕ್ಕೂ ಮೊದಲು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಸಿಸ್ ನೆಲದಲ್ಲಿ 1 ಸಾವಿರ ರನ್ ಗಳಿಸಿದ ಆಟಗಾರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com