ಬಳಿಕ ಬಂದ ಕೇದಾರ್ ಜಾದವ್ ಕೇವಲ 1 ರನ್ ಗಳಿಸಿ ಮತ್ತದೇ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಭುವನೇಶ್ವರ್ ಕುಮಾರ್ ಕೂಡ ಕೇವಲ 1 ರನ್ ಗಳಿಸಿ ಗ್ರಾಂಡ್ ಹೋಮ್ ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಸತತ 3 ಬೌಂಡಿರ ಬಾರಿಸಿ ನಿರೀಕ್ಷೆ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಕೂಡ ಕೇವಲ 16 ರನ್ ಗಳಿಸಿ ಬೌಲ್ಟ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಅಂತಿಮ ಹಂತದಲ್ಲಿ ಕಿವೀಸ್ ಬೌಲರ್ ಗಳ ಎದುರು ಕುಲದೀಪ್ ಯಾದವ್ (15 ರನ್) ಮತ್ತು ಯಜುವೇಂದ್ರ ಚಾಹಲ್ ಕೊಂಚ ಪ್ರತಿರೋಧ ತೋರಿದರಾದರೂ, 15 ರನ್ ಗಳಿಸಿದ್ದ ಕುಲದೀಪ್ ಯಾದವ್ ಟಾಡ್ ಆ್ಯಸ್ಟಲ್ ಬೌಲಿಂಗ್ ನಲ್ಲಿ ಔಟ್ ಆದರು. ಅಂತಿಮವಾಗಿ ರನ್ ಗಳಿಸಿದ್ದ ಖಲೀಲ್ ಅಹ್ಮದ್ ಕೂಡ ನೀಶಮ್ ಬೌಲಿಂಗ್ ನಲ್ಲಿ ಬೋಲ್ಡ್ ಆಗುವುದರೊಂದಿಗೆ ಕೇವಲ 92 ರನ್ ಗಳಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು.