ಭಾರತ ಸೋಲಿನ ಬಳಿಕ ಪ್ರತಿಕ್ರಿಯಿಸಿದ ದಾದಾ, ಮೊದಲ 10 ಹಾಗೂ ಕೊನೆಯ 5 ಓವರ್ಗಳು ಇಂಗ್ಲೆಂಡ್ ವಿರುದ್ಧ ಹಿನ್ನಡೆ ಅನುಭವಿಸಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ. ದೊಡ್ಡ ರನ್ ಗುರಿ ಮುಂದಿದ್ದಾಗಲೂ ಮೊದಲ 10 ಓವರ್ಗಳಲ್ಲಿ ರೋಹಿತ್ ಶರ್ಮಾ(102), ವಿರಾಟ್ ಕೊಹ್ಲಿ(66) ನಿಧಾನಗತಿಯ ರನ್ ಬಾರಿಸಿದ್ದು ಮತ್ತು ಪ್ರತಿ ಓವರ್ಗೆ 13 ರನ್ಗಳ ಅವಶ್ಯಕತೆಯಿದ್ದಾಗಲೂ ಕೊನೆಯ 5 ಓವರ್ಗಳಲ್ಲಿ ಎಂಎಸ್ ಧೋನಿ ಮತ್ತು ಕೇದಾರ್ ಜಾಧವ್ ಎಸೆತಗಳಿಗೆ ಒಂದೊಂದು ರನ್ ಮೊರೆ ಹೋಗಿದ್ದು ಭಾರತದ ಗೆಲುವಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.