ಬುಮ್ರಾರ ಪರ್ಫೆಕ್ಟ್ ಯಾರ್ಕರ್​​ಗೆ ಪತರಗುಟ್ಟಿದ ಬಾಂಗ್ಲಾ ಬ್ಯಾಟ್ಸ್‌ಮನ್; ಗೋಲ್ಡನ್ ಡಕೌಟ್, ವಿಡಿಯೋ ವೈರಲ್!

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಭರವಸೆಯ ಬೌಲರ್, ಪರ್ಫೆಕ್ಟ್ ಯಾರ್ಕರ್​​ ಸ್ಪೆಷಲಿಸ್ಟ್ ಆಗಿರುವ ಜಸ್ ಪ್ರೀತ್ ಬುಮ್ರಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ.
ಜಸ್ ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ
Updated on: 
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಭರವಸೆಯ ಬೌಲರ್, ಪರ್ಫೆಕ್ಟ್ ಯಾರ್ಕರ್​​ ಸ್ಪೆಷಲಿಸ್ಟ್ ಆಗಿರುವ ಜಸ್ ಪ್ರೀತ್ ಬುಮ್ರಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಈ ಮಧ್ಯೆ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಬುಮ್ರಾ ಪರ್ಫೆಕ್ಟ್ ಯಾರ್ಕರ್ ಮಾಡಿ ಕ್ಲೀನ್ ಬೋಲ್ಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಂಡಿದ್ದು ಬಾಂಗ್ಲಾದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಬುಮ್ರಾ ಶಕೀಬ್ ಅಲ್ ಹಸನ್ ಅವರನ್ನು ಮೊದಲ ಎಸೆತದಲ್ಲಿ ಯಾರ್ಕರ್ ಹಾಕಿ ಕ್ಲೀನ್ ಬೋಲ್ಡ್ ಮಾಡಿದರು. ಗಂಟೆಗೆ 141 ಕಿ.ಮೀ ವೇಗದಲ್ಲಿ ಬುಮ್ರಾ ಚೆಂಡನ್ನು ಎಸೆದಿದ್ದು ಶಕೀಬ್ ಬ್ಯಾಟ್ ಬೀಸುವಷ್ಟರಲ್ಲೇ ಚೆಂಡು ವಿಕೆಟ್ ಗೆ ಬಡಿದಿತ್ತು.
ಅಭ್ಯಾಸ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಪೇರಿಸಿತ್ತು. 360 ರನ್ ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ 264 ರನ್ ಗಳಿಗೆ ಆಲೌಟ್ ಆಗಿ 95 ರನ್ ಗಳಿಂದ ಸೋಲು ಕಂಡಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com