ಭಾರತ-ಆಫ್ರಿಕಾ
ಭಾರತ-ಆಫ್ರಿಕಾ

ಮೊದಲ ಟೆಸ್ಟ್: ಆಫ್ರಿಕಾ ವಿರುದ್ಧ 502 ರನ್‌ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 502 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 502 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 502 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಪರ ಮಾಯಾಂಕ್ ಅಗರವಾಲ್ 215 ಮತ್ತು ರೋಹಿತ್ ಶರ್ಮಾ 176 ರನ್ ಗಳ ನೆರವಿನೊಂದಿಗೆ ಭಾರತ ಬೃಹತ್ ಮೊತ್ತ ಕಲೆಹಾಕಿದೆ.

ಇನ್ನುಳಿದಂತೆ ಚೇತೇಶ್ವರ ಪೂಜಾರ 6, ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 15 ರವೀಂದ್ರ ಜಡೇಜಾ ಅಜೇಯ 30 ರನ್ ಕಲೆ ಹಾಕಿದ್ದಾರೆ.

ಆಫ್ರಿಕಾ ಪರ ಬೌಲಿಂಗ್ ನಲ್ಲಿ ಕೇಶವ್ ಮಹಾರಾಜ್ 3, ಫಿಲಾಂಡರ್, ಮುತ್ತುಸಾಮಿ ಮತ್ತು ಎಲ್ಗರ್ ತಲಾ 1 ವಿಕೆಟ್ ಪಡೆದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com