ಧೋನಿ ಸ್ಥಾನಕ್ಕೆ ರಾಹುಲ್ ಸಂಭಾವ್ಯ ಆಯ್ಕೆ: ಗೌತಮ್ ಗಂಭೀರ್

ಪ್ರಸಕ್ತ ವರ್ಷ ಒಂದು ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ಜರುಗದಿದ್ದರೆ ಮಾಜಿ ನಾಯಕ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಮರಳುವುದು ಕ್ಷೀಣವಾಗಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಸಂಸದ  ಗೌತಮ್ ಗಂಭೀರ್ ಸೋಮವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಪ್ರಸಕ್ತ ವರ್ಷ ಒಂದು ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ಜರುಗದಿದ್ದರೆ ಮಾಜಿ ನಾಯಕ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಮರಳುವುದು ಕ್ಷೀಣವಾಗಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಸಂಸದ  ಗೌತಮ್ ಗಂಭೀರ್ ಸೋಮವಾರ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಕನೆಕ್ಟೆಡ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಒಂದು ವೇಳೆ ಐಪಿಎಲ್ ಈ ವರ್ಷ ನಡೆಯದಿದ್ದರೆ, ಧೋನಿ ತಂಡಕ್ಕೆ ಮರಳುವುದು ತುಂಬ ಕಠಿಣ. ಏಕೆಂದರೆ ಸುಮಾರು ಒಂದೂವರೆ ವರ್ಷದಿಂದ ಧೋನಿ ಕ್ರಿಕೆಟ್ ನಲ್ಲಿ ಪಾಲ್ಗೊಂಡಿರದ ಕಾರಣ ಅವರ ಆಯ್ಕೆ  ಕಷ್ಟ. ಹೀಗಾಗಿ ಅವರ ಸ್ಥಾನಕ್ಕೆ ಕೆ.ಎಲ್. ರಾಹುಲ್ ಸೂಕ್ತ ಸಂಭಾವ್ಯ ಆಟಗಾರರನಾಗಿದ್ದಾರೆ ಎಂದು ಮಾಜಿ ಎಡಗೈ ಬ್ಯಾಟ್ಸ್ ಮನ್ ಹೇಳಿದ್ದಾರೆ.

ಸದ್ಯ ಮಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಸಂಬಂಧ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಈ ಪರಿಸ್ಥಿತಿಯಲ್ಲಿ ಐಪಿಎಲ್ ನಡೆಯುವ ಬಗ್ಗೆ ಅನುಮಾನ  ಉಂಟಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com