ಲಾಕ್ ಡೌನ್: ರಾಂಚಿಯಲ್ಲಿ ಮಗಳು ಝಿವಾ ಜತೆಗೆ ಎಂಎಸ್ ಧೋನಿ ಜಾಲಿ ರೈಡ್‌, ವಿಡಿಯೋ ವೈರಲ್!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದು ಈಗಾಗಲೇ 8 ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಮಾರ್ಚ್‌ 29ರಂದು ಶುರುವಾಗಬೇಕಿದ್ದ ಐಪಿಎಲ್‌ ಟೂರ್ನಿ ಮೂಲಕ ಧೋನಿ ಕಮ್‌ಬ್ಯಾಕ್‌ ಮಾಡಬೇಕಿತ್ತು.
ಎಂಎಸ್ ಧೋನಿ
ಎಂಎಸ್ ಧೋನಿ
Updated on

ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದು ಈಗಾಗಲೇ 8 ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಮಾರ್ಚ್‌ 29ರಂದು ಶುರುವಾಗಬೇಕಿದ್ದ ಐಪಿಎಲ್‌ ಟೂರ್ನಿ ಮೂಲಕ ಧೋನಿ ಕಮ್‌ಬ್ಯಾಕ್‌ ಮಾಡಬೇಕಿತ್ತು. ಆದರೆ ಕೊರೊನಾ ವೈರಸ್‌ನಿಂದಾಗಿ ಐಪಿಎಲ್‌ ಟೂರ್ನಿ ಮತ್ತು ಧೋನಿ ಕ್ರಿಕೆಟ್‌ ಭವಿಷ್ಯ ಎರಡೂ ಅತಂತ್ರ ಸ್ಥಿತಿ ತಲುಪಿದೆ.

ಅಂದಹಾಗೆ ಯಾವುದೇ ಕಾರಣ ನೀಡದೆ, ಕಮ್‌ಬ್ಯಾಕ್‌ ಮಾಡುವುದರ ಕುರಿತಾಗಿಗೂ ಸ್ಪಷ್ಟ ಮಾಹಿತಿ ನೀಡದೆ ವಿರಾಮ ತೆಗೆದುಕೊಂಡಿದ್ದ ಧೋನಿ, ತಮ್ಮ ಬಹುಪಾಲು ಸಮಯವನ್ನು ಕುಟುಂಬದವರೊಟ್ಟಿಗೆ ಕಳೆದಿದ್ದರು. ಇದೀಗ ಲಾಕ್‌ಡೌನ್ ದಿನಗಳಲ್ಲಿ ರಾಂಚಿಯ ಹೊರ ಭಾಗದಲ್ಲಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿ ನೆಲೆಸಿದ್ದಾರೆ.

ಈ ಸಂದರ್ಭದಲ್ಲಿ ಮುದ್ದಿನ ಮಗಳು ಝಿವಾ ಜೊತೆಗೆ ತಮ್ಮ ಐಶಾರಾಮಿ ಫಾರ್ಮ್‌ ಹೌಸ್‌ನಲ್ಲಿ ಧೋನಿ ಬೈಕ್‌ರೈಡ್‌ ಮಾಡುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ. ತಮ್ಮ ಗ್ಯಾರೇಜ್‌ನಲ್ಲಿ ಸೂಪರ್‌ ಬೈಕ್‌ಗಳನ್ನು ಒಳಗೊಂಡಂತೆ ನೆಚ್ಚಿನ ಬೈಕ್‌ಗಳನ್ನು ಸಾಲು ಸಾಲಾಗಿ ನಿಲ್ಲಿಸಿರುವ ಧೋನಿ, ಹಳೆಯ ರಾಜ್‌ದೂತ್‌ ಬೈಕ್‌ ಏರಿ ಮಗಳೊಟ್ಟಿಗೆ ಜಾಲಿ ರೈಡ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಪತ್ನಿ ಸಾಕ್ಷಿ ಸಿಂಗ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

"ಮಕ್ಕಳು ಇಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ದೊಡ್ಡ ಮಗು ಜೊತೆಗೆ ಚಿಕ್ಕ ಮಗು ಇಬ್ಬರೂ," ಎಂದು ಧೋನಿ ಮತ್ತು ಮಗಳನ್ನು ಸೂಚಿಸಿ ವಿಡಿಯೋದೊಂದಿಗೆ ಸಾಕ್ಷಿ ಸಂದೇಶ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com