ಮಲಗಿರುವ ಕರಡಿಯನ್ನು ಕೆಣಕಬೇಡಿ: ಕೊಹ್ಲಿ ಬಗ್ಗೆ ಆಸೀಸ್ ಸಹ ಆಟಗಾರರಿಗೆ ವಾರ್ನರ್ ಕಿವಿಮಾತು!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕುವುದು ಮಲಗಿರುವ ಕರಡಿಯನ್ನು ಕೆಣಕಿದಂತೆ ಎಂದು ಸಹ ಆಟಗಾರರಿಗೆ ಡೇವಿಡ್ ವಾರ್ನರ್ ಕಿವಿ ಮಾತು ಹೇಳಿದ್ದಾರೆ.
ಕೊಹ್ಲಿ
ಕೊಹ್ಲಿ
Updated on: 

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕುವುದು ಮಲಗಿರುವ ಕರಡಿಯನ್ನು ಕೆಣಕಿದಂತೆ ಎಂದು ಸಹ ಆಟಗಾರರಿಗೆ ಡೇವಿಡ್ ವಾರ್ನರ್ ಕಿವಿ ಮಾತು ಹೇಳಿದ್ದಾರೆ. 

ಬಾರ್ಡರ್-ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಇದೇ ವರ್ಷದ ಕೊನೆಯಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗಾಗಿ ಕೊಹ್ಲಿಯನ್ನು ಸ್ಲೆಡ್ಜ್ ಮೂಲಕ ಕೆಣಕದಂತೆ ತಮ್ಮ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. 

ಮಲಗಿರುವ ಕರಡಿಯನ್ನು ಚುಚ್ಚಿ ಎಬ್ಬಿಸುವುದೂ, ವಿರಾಟ್ ಕೊಹ್ಲಿಯನ್ನು ಕೆಣಕುವೂದು ಎರಡು ಒಂದೇ. ಕೊಹ್ಲಿಯನ್ನು ಸ್ವಲ್ಪ ಕೆಣಕಿದರೂ ಅವರು ಆವೇಶಭರಿತರಾಗಿ ಆಡುತ್ತಾರೆ. ಇದನ್ನು ನಾವು ಸ್ವತಃ ನೋಡಿದ್ದೇವೆ. ಹೀಗಾಗಿ ಸ್ಲೆಡ್ಜಿಂಗ್ ಮಾಡಲು ಹೋಗಬೇಡಿ ಎಂದು ಹೇಳಿದ್ದಾರೆ. 

ಮಹಾಮಾರಿ ಕೊರೋನಾ ವೈರಸ್ ವೇಗಿ ತಗ್ಗುತ್ತಿದ್ದಂತೆ ಕ್ರಿಕೆಟ್ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿದ್ದು ಅದಾಗಲೇ ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 3ರಂದು ಗಬ್ಬಾದಲ್ಲಿ ಆಸ್ಟ್ರೇಲಿಯಾ-ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com