ಟಿ20 ವಿಶ್ವಕಪ್: ದಾಖಲೆಯ 55 ರನ್ ಗೆ ಆಲೌಟಾದ ವೆಸ್ಟ್ ಇಂಡೀಸ್ ತಂಡಕ್ಕೆ ಹೀನಾಯ ಸೋಲು: 8.2 ಓವರ್ ಗಳಲ್ಲಿ ಗುರಿ ಮುಟ್ಟಿದ ಇಂಗ್ಲೆಂಡ್

ವೆಸ್ಟ್ ಇಂಡೀಸ್ ಆಟಗಾರರು ಎರಡಂಕಿ ರನ್ ಗಳಿಸಲೂ ಹರಸಾಹಸ ಪಟ್ಟರು. ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಮಾತ್ರವೆ ಎರಡಂಕಿ ರನ್(11) ಗಳಿಸಿದರು.
ಇಂಗ್ಲೆಂಡ್ ಆಟಗಾರರ ವಿಜಯದ ಸಂಭ್ರಮ
ಇಂಗ್ಲೆಂಡ್ ಆಟಗಾರರ ವಿಜಯದ ಸಂಭ್ರಮ
Updated on

ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂದು ಶನಿವಾರ ವೆಸ್ಟ್ ಇಂಡೀಸ್- ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹೀನಾಯ ಸೋಲು ಕಂಡಿದೆ. ಪಂದ್ಯದ ಶುರುವಿನಲ್ಲಿ ಟಾಸ್ ಸೋತ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿತ್ತು. 

ಇಂಗ್ಲೆಂಡ್ ತಂಡದ ಬೌಲರ್ ಗಳ ದಾಳಿಗೆ ತಿಣುಕಾಡಿದ ವೆಸ್ಟ್ ಇಂಡೀಸ್ ಆಟಗಾರರು ಎರಡಂಕಿ ರನ್ ಗಳಿಸಲೂ ಹರಸಾಹಸ ಪಟ್ಟರು. ಇದರ ಪರಿಣಾಮ 14.2 ಓವರ್ ಗಳಲ್ಲಿ 55 ರನ್ ಗಳಿಸಲಷ್ಟೇ ಶಕ್ತವಾದ ವೆಸ್ಟ್ ಇಂಡೀಸ್ ತಂಡ ಆಲೌಟ್ ಆಯಿತು.  

ನಂತರ ಬ್ಯಾಟಿಂಗ್ ಗೆ ಬಂದ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು, ಇನ್ನೂ 70 ಬಾಲ್ ಗಳು ಉಳಿದಿರುವಂತೆಯೇ 56 ರನ್ ಗಳಿಸಿ ಗೆಲುವಿನ ನಗೆ ಬೀರಿತು. ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಮಾತ್ರವೆ ಎರಡಂಕಿ ರನ್(11) ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com