5ನೇ ಟೆಸ್ಟ್: ಮೊದಲ ದಿನ, ಇಂಗ್ಲೆಂಡ್ ವಿರುದ್ಧ ಪಂತ್ ಅಮೋಘ ಶತಕ, ಭಾರತ 338/7

ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಅದ್ಭುತ ಶತಕ ಮತ್ತು ರವೀಂದ್ರ ಜಡೇಜಾ ಅವರ 222 ರನ್‌ಗಳ...
ರಿಷಬ್ ಪಂತ್
ರಿಷಬ್ ಪಂತ್
Updated on

ಬರ್ಮಿಂಗ್‌ಹ್ಯಾಮ್: ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಅದ್ಭುತ ಶತಕ ಮತ್ತು ರವೀಂದ್ರ ಜಡೇಜಾ ಅವರ 222 ರನ್‌ಗಳ ಅಮೋಘ ಜೊತೆಯಾಟದ ನೆರವಿನಿಂದ ಭಾರತ ಏಳು ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 100 ರನ್‌ಗಳ ಗಡಿ ದಾಟಿವ ಮೊದಲೇ ಅಗ್ರ ಕ್ರಮಾಂಕದ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್‌ ಆಂಡರ್ಸನ್‌ ಪ್ರಮುಖ 3 ವಿಕೆಟ್‌ ಕಿತ್ತು ಭಾರತಕ್ಕೆ ಆಘಾತ ನೀಡಿದ್ದರು.

ನಂತರ ಆರನೇ ವಿಕೆಟ್‌ಗೆ ಜೊತೆಯಾದ ರಿಷಭ್ ಪಂತ್‌ ಮತ್ತು ರವೀಂದ್ರ ಜಡೇಜಾ ಪ್ರತಿಹೋರಾಟ ನಡೆಸಿ ಅರ್ಧಶತಕದ ಜೊತೆಯಾಟ ಕಟ್ಟಿದರು. ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ರಿಷಭ್ ಪಂತ್‌ ಇಂಗ್ಲೆಂಡ್‌ ನೆಲದಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು.

ಸದ್ಯ ಎಚ್ಚರಿಕೆಯಿಂದ ಬ್ಯಾಟ್‌ ಮಾಡುತ್ತಿರುವ ರವೀಂದ್ರ ಜಡೇಜಾ(83*) ಮತ್ತು ಮೊಹಮ್ಮದ್ ಶಮಿ (0*) ಕ್ರೀಸ್‌ನಲ್ಲಿ ಇದ್ದಾರೆ. 

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಮೇಲುಗೈ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಬುಮ್ರಾ ಪಡೆ ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com